ಅರುಣಾಚಲ ಪ್ರದೇಶ: ಶುಕ್ರವಾರ ಬೆಳಗ್ಗೆ 6.56ಕ್ಕೆ ಪಂಗಿನ್ನ ಉತ್ತರದಲ್ಲಿ ಅರುಣಾಚಲ ಪ್ರದೇಶದ ಪಂಗಿನ್ನ ಉತ್ತರ ಭಾಗದಲ್ಲಿ ಶುಕ್ರವಾರ ಮುಂಜಾನೆ ಭೂಮಿ ಕಂಪಿಸಿದೆ.
ಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆ ಎಂದು ದಾಖಲಾಗಿದೆ. ಅರುಣಾಚಲ ಪ್ರದೇಶದ ಪಂಗಿನ್ನಿಂದ ಉತ್ತರಕ್ಕೆ 1176 ಕಿಮೀ ದೂರದಲ್ಲಿ 06:56 ಗಂಟೆಗಳಲ್ಲಿ ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರ (NCS) ತಿಳಿಸಿದೆ.
ಈ ಕುರಿತಂತೆ ಅಧಿಕೃತ ಟ್ವೀಟ್ ಮಾಡಿರುವ ಎನ್ ಸಿ ಎಸ್, ” ಭೂಕಂಪದ ತೀವ್ರತೆ: 5.3, 15-04-2022 ರಂದು ಸಂಭವಿಸಿದೆ, ಸಮಯ 06:56:19 IST, ಅಕ್ಷಾಂಶ: 38.62 ಮತ್ತು ರೇಖಾಂಶ: 97.05, ಆಳ: 30 ಕಿಮೀ, ಸ್ಥಳ: 1176 ಕಿಮೀ ಎನ್ ಪ್ಯಾಂಗಿನ್, ಅರುಣಾಚಲ ಪ್ರದೇಶ,” ಸದ್ಯದ ಮಾಹಿತಿಯಂತೆ ಭೂಕಂಪದಿಂದ ಯಾವುದೇ ಸಾವು ನೋವು ಸಂಭವಿಸಿದೆ.