News Karnataka Kannada
Wednesday, May 01 2024
ಅರುಣಾಚಲಪ್ರದೇಶ

ಅರುಣಾಚಲ ಪ್ರದೇಶವು ತನ್ನ ಅಂತರ್ಗತ ಭಾಗ : ಚೀನಾ ಸಮರ್ಥನೆ

19th round of Corps Commander-level meeting between India, China
Photo Credit :

ಬೀಜಿಂಗ್: ಭಾರತದ ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದ 15 ಸ್ಥಳಗಳ ಹೆಸರುಗಳ ಮರುನಾಮಕರಣವನ್ನು ಶುಕ್ರವಾರ ಸಮರ್ಥಿಸಿಕೊಂಡಿರುವ ಚೀನಾ, ಟಿಬೆಟ್‌ನ ದಕ್ಷಿಣ ಭಾಗವು (ಅರುಣಾಚಲ ಪ್ರದೇಶ) ತನ್ನ ಭೂಪ್ರದೇಶದ ‘ಅಂತರ್ಗತ ಭಾಗ’ ಎಂದು ಪ್ರತಿಪಾದಿಸಿದೆ.

ಅರುಣಾಚಲಪ್ರದೇಶದ 15 ಸ್ಥಳಗಳನ್ನು ಮರುನಾಮಕರಣ ಮಾಡಿರುವ ಚೀನಾದ ಕ್ರಮವನ್ನು ಗುರುವಾರ ಬಲವಾಗಿ ತಿರಸ್ಕರಿಸಿದ್ದ ಭಾರತ, ‘ಅರುಣಾಚಲಪ್ರದೇಶ ರಾಜ್ಯವು ಯಾವಾಗಲೂ ಭಾರತದೊಂದಿಗೆ ಇತ್ತು ಮತ್ತು ಅದು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿದೆ. ಹೆಸರುಗಳನ್ನು ಮರುನಾಮಕಾರಣ ಮಾಡಿದ ಮಾತ್ರಕ್ಕೆ ಸತ್ಯವನ್ನು ಬದಲಾಯಿಸಲಾಗದು’ ಎಂದೂ ಪ್ರತಿಪಾದಿಸಿತ್ತು.

ಭಾರತದ ಸಮರ್ಥನೆ ಮತ್ತು ಪ್ರತಿಪಾದನೆಯ ಕುರಿತು ಶುಕ್ರವಾರ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೊ ಲಿಜಿಯಾನ್ ಅವರು, ‘ಟಿಬೆಟ್‌ನ ದಕ್ಷಿಣ ಭಾಗವು ಅರ್ಥಾತ್ ಅರುಣಾಚಲಪ್ರದೇಶವು ಟಿಬೆಟ್‌ ಸ್ವಾಯತ್ತ ಪ್ರದೇಶವಾದ ಚಿನ್‌ಗೆ ಸೇರಿದೆ ಮತ್ತು ಚೀನಾದ ಅಂತರ್ಗತ ಪ್ರದೇಶವಾಗಿದೆ’ ಎಂದಿದ್ದಾರೆ.

‘ವಿವಿಧ ಜನಾಂಗೀಯ ಗುಂಪುಗಳ ಜನರು ಅನೇಕ ವರ್ಷಗಳಿಂದ ಆ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ ಮತ್ತು ಆ ಪ್ರದೇಶಗಳಿಗೆ ಅನೇಕ ಹೆಸರುಗಳನ್ನು ನೀಡಿದ್ದಾರೆ. ಚೀನಾದ ಅಧಿಕಾರಿಗಳು ಸಂಬಂಧಿತ ಪ್ರದೇಶಕ್ಕೆ ನಿಯಮಗಳಿಗೆ ಅನುಸಾರವಾಗಿ ಹೆಸರುಗಳನ್ನು ಪ್ರಕಟಿಸಿದ್ದಾರೆ. ಇವುಗಳು ಚೀನಾದ ಸಾರ್ವಭೌಮತ್ವದ ಒಳಗಿನ ವಿಷಯಗಳಾಗಿವೆ’ ಎಂದೂ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಆರು ಸ್ಥಳಗಳ ಹೆಸರುಗಳನ್ನು ಚೀನಾವು 2017ರಲ್ಲಿ ಮೊದಲ ಪಟ್ಟಿಯಲ್ಲಿ ಬಿಡುಗಡೆ ಮಾಡಿತ್ತು. ಇದೀಗ ಎರಡನೇ ಪಟ್ಟಿಯಲ್ಲಿ ಅರುಣಾಚಲಪ್ರದೇಶದ ಸ್ಥಳಗಳ ಹೆಸರುಗಳನ್ನು ಬಿಡುಗಡೆ ಮಾಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು