News Karnataka Kannada
Saturday, May 04 2024
ಅರುಣಾಚಲಪ್ರದೇಶ

ಭಾರತೀಯ ವಾಯುಪಡೆ ಅರುಣಾಚಲ ಪ್ರದೇಶದ ರೋಚಮ್ ಹೆಲಿಪ್ಯಾಡ್​​ನಲ್ಲಿ ​ಕ್ರ್ಯಾಶ್​ಲ್ಯಾಂಡ್

New Project 2021 11 19t124859.706
Photo Credit :

ಅರುಣಾಚಲ ಪ್ರದೇಶ:ಭಾರತೀಯ ವಾಯುಪಡೆಗೆ ಸೇರಿದ ಎಂಐ – 17 ಹೆಲಿಕಾಪ್ಟರ್​​ ಅರುಣಾಚಲ ಪ್ರದೇಶದ ರೋಚಮ್​ ಹೆಲಿಪ್ಯಾಡ್​​ನಲ್ಲಿ ಕ್ರ್ಯಾಶ್​ಲ್ಯಾಂಡ್​ ಆಗಿದೆ.ಇದರ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.23 ಸೆಕೆಂಡ್​ಗಳ ವಿಡಿಯೋದಲ್ಲಿ ಐಎಎಫ್​ ಚಾಪರ್​ ತನ್ನ ನಿಯಂತ್ರಣ ಕಳೆದುಕೊಂಡಿದ್ದನ್ನು ಕಾಣಬಹುದಾಗಿದೆ.

ಗುರುವಾರ ಈ ಹೆಲಿಕಾಪ್ಟರ್​ ಕ್ರ್ಯಾಶ್​ ಲ್ಯಾಂಡ್​ ಆಗಿದ್ದು ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್​​ ಅರುಣಾಚಲ ಪ್ರದೇಶದ ರೋಚಮ್​ನಲ್ಲಿ ಕ್ರ್ಯಾಶ್​ ಲ್ಯಾಂಡ್​ ಆಗಿದೆ. ಹೆಲಿಕಾಪ್ಟರ್​ನಲ್ಲಿ ಉಂಟಾದ ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎನ್ನಲಾಗಿದೆ.ಈ ಹೆಲಿಕಾಪ್ಟರ್​ನಲ್ಲಿ ಇಬ್ಬರು ಪೈಲಟ್​ ಹಾಗೂ ಮೂವರು ಸಿಬ್ಬಂದಿ ಇದ್ದರು ಎನ್ನಲಾಗಿದೆ.

ಈ ಹೆಲಿಕಾಪ್ಟರ್​ನ ಮುಖಾಂತರ ಹಯುಲಿಯಾಂಗ್​ನಿಂದ ಚೀನಾ ಹಾಗೂ ಮ್ಯಾನ್ಮಾರ್​ ಗಡಿಯಲ್ಲಿರುವ ಅಂಜಾವ್​ ಜಿಲ್ಲೆಯ ರೋಚಾಮ್​ವರೆಗೆ ಪಡಿತರ ವಿತರಣೆ ಮಾಡಲಾಗುತ್ತಿತ್ತು. ಈ ಅವಘಡದಿಂದಾಗಿ ಹೆಲಿಕಾಪ್ಟರ್​ನಲ್ಲಿದ್ದ ಇಂಜಿನಿಯರ್​ಗೆ ಸಣ್ಣ ಪುಟ್ಟ ಗಾಯಗಳಾಗಿದ್ದರೆ ಪೈಲಟ್​ ಹಾಗೂ ಇತರೆ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು