News Karnataka Kannada
Sunday, May 05 2024
ದೇಶ

ಜಿಮ್‌ ಮೇಲ್ಚಾವಣಿ ಕುಸಿದು 10 ಜನ ದುರ್ಮರಣ

gymnasium collapsed
Photo Credit : News Kannada

ಬೀಜಿಂಗ್: ಜಿಮ್‌ನಲ್ಲಿ ವರ್ಕ್ ಔಟ್ ಮಾಡುತ್ತಿದ್ದವರ ಮೇಲೆ ಮೇಲ್ಛಾವಣಿ ಕುಸಿದು ಹತ್ತು ಮಂದಿ ಮೃತಪಟ್ಟಿದ್ದು, ಓರ್ವ ಅವಶೇಷಗಳಡಿ ಸಿಲುಕಿರುವ ಘಟನೆ ಈಶಾನ್ಯ ಚೀನಾದಲ್ಲಿ ನಡೆದಿದೆ.

ಹೀಲಾಂಗ್‌ಜಿಯಾಂಗ್ ಪ್ರಾಂತ್ಯದ ಕಿಕಿಹಾರ್‌ನಲ್ಲಿರುವ ನಂ. 34ನಲ್ಲಿರುವ ಜಿಮ್ ನಲ್ಲಿ ಘಟನೆ ಸಂಭವಿಸಿದ್ದು ಮೇಲ್ಚಾವಣಿ ಕುಸಿದ ವೇಳೆ ಹದಿನಾಲ್ಕು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ.  ಘಟನಾ ಸ್ಥಳಕ್ಕೆ ಸುಮಾರು 160 ಅಗ್ನಿಶಾಮಕ ಸಿಬ್ಬಂದಿಗಳನ್ನು ಒಳಗೊಂಡ ತಂಡ  ಧಾವಿಸಿದೆ. ರಕ್ಷಣಾ ಕಾರ್ಯ ನಡೆಸಿದ ವೇಳೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು ಆರು ಮಂದಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕಟ್ಟಡ ನಿರ್ಮಾಣ ಮಾಡಿದ ಕಂಪನಿಯ ಉಸ್ತುವಾರಿ ವಹಿಸಿದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಚೀನಾ ರಾಜ್ಯ ಮಾಧ್ಯಮ ವರದಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು