News Karnataka Kannada
Wednesday, May 01 2024
ರಾಜಸ್ಥಾನ

ಫೇಸ್ ಬುಕ್ ಸ್ನೇಹಿತನನ್ನು ಭೇಟಿಯಾಗಲು ಪಾಕ್ ತಲುಪಿದ ರಾಜಸ್ಥಾನದ ವಿವಾಹಿತ ಮಹಿಳೆ

Married woman from Rajasthan reaches Pakistan to meet Facebook friend
Photo Credit : IANS

ಜೈಪುರ: ಪಾಕಿಸ್ತಾನದ ಸೀಮಾ ಹೈದರ್ ತನ್ನ ಪ್ರೀತಿಯನ್ನು ಭೇಟಿಯಾಗಲು ಗಡಿ ಮತ್ತು ಅಡೆತಡೆಗಳನ್ನು ದಾಟಿ ಭಾರತಕ್ಕೆ ತಲುಪುವ ಮೂಲಕ ಸುದ್ದಿಯಲ್ಲಿರುವ ಸಮಯದಲ್ಲಿ, ರಾಜಸ್ಥಾನದ ವಿವಾಹಿತ ಇಬ್ಬರು ಮಕ್ಕಳ ತಾಯಿ ಅಂಜು ರಾಫೆಲ್ ಕೂಡ ತನ್ನ ಫೇಸ್ ಬುಕ್ ಸ್ನೇಹಿತನನ್ನು ಭೇಟಿಯಾಗಲು ತನ್ನ ಇಬ್ಬರು ಮಕ್ಕಳು ಮತ್ತು ಪತಿಯನ್ನು ಬಿಟ್ಟು  ಗಡಿ ದಾಟಿದ್ದಾರೆ.

ಭಿವಾಡಿ ನಿವಾಸಿ ಅಂಜು ವಾಹನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಫೇಸ್ ಬುಕ್  ನಲ್ಲಿ ಸ್ನೇಹ ಬೆಳೆಸಿದ್ದ ಅಂಜು ನಸ್ರುಲ್ಲಾನನ್ನು ಭೇಟಿಯಾಗಲು ಖೈಬರ್ ಪಖ್ತುಂಖ್ವಾ ಪ್ರಾಂತ್ಯಕ್ಕೆ ತಲುಪಿದ್ದೇನೆ ಎಂದು  ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ಲಾಹೋರ್ ತಲುಪಿದ ನಂತರ, ಮಹಿಳೆ ತನ್ನ ಪತಿ ಅರವಿಂದ್ ಗೆ ಕರೆ ಮಾಡಿ ತಾನು ಸ್ನೇಹಿತನನ್ನು ಭೇಟಿಯಾಗಲು ಲಾಹೋರ್ ಗೆ ಬಂದಿದ್ದೇನೆ ಮತ್ತು ಮೂರು-ನಾಲ್ಕು ದಿನಗಳಲ್ಲಿ ಭಾರತಕ್ಕೆ ಹಿಂತಿರುಗುವುದಾಗಿ ಹೇಳಿದ್ದಾರೆ. ಆದರೆ ಅಂಜು ತನ್ನ ಪ್ರಿಯಕರನನ್ನು ಭೇಟಿಯಾಗಲು ಗಡಿದಾಟಿ ಹೋಗಿದ್ದಾಳೆ ಎಂದು ಅರವಿಂದ್ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದಾರೆ.

ಅವರು ೨೦೦೭ ರಲ್ಲಿ ವಿವಾಹವಾದರು ಮತ್ತು ಅಂಜು ಮೂಲತಃ ಗ್ವಾಲಿಯರ್ ಮೂಲದವರು ಎಂದು ಅವರ ಪತಿ ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಹೈಕಮಿಷನ್ ಮಾಹಿತಿ ಕೋರಿರುವುದರಿಂದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು