News Karnataka Kannada
Tuesday, April 23 2024
Cricket
ದೇಶ

ಭಾರತದಲ್ಲಿ ಇವಿ ಉತ್ಪದನಾ ಘಟಕ ಸ್ಥಾಪನೆಗೆ ಮುಂದಾದ ಟೆಸ್ಲಾ

Tesla
Photo Credit : Twitter

ನವದೆಹಲಿ: ವಾರ್ಷಿಕ ಐದು ಲಕ್ಷ ಎಲೆಕ್ಟ್ರಿಕ್ ಕಾರು ಉತ್ಪದನಾ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಟೆಸ್ಲಾ ಸಂಸ್ಥೆ ಮುಂದೆ ಬಂದಿದೆ. ವಾರ್ಷಿಕ 500,000 ಎಲೆಕ್ಟ್ರಿಕ್ ವಾಹನಗಳ ಸಾಮಥ್ರ್ಯದೊಂದಿಗೆ ದೇಶದಲ್ಲಿ ಕಾರು ಕಾರ್ಖಾನೆಯನ್ನು ಸ್ಥಾಪಿಸುವ ಹೂಡಿಕೆ ಪ್ರಸ್ತಾವನೆಗಾಗಿ ಟೆಸ್ಲಾ ಭಾರತ ಸರ್ಕಾರದೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.

ಬೆಲಿಯನೀರ್ ಎಲೋನ್ ಮಸ್ಕ್ ಅವರ ಒಡೆತನದ ಟೆಸ್ಲಾ ಸಂಸ್ಥೆ ಉತ್ಪಾದಿಸುವ ಎಲೆಕ್ಟ್ರಿಕ್ ವಾಹನಗಳ ಬೆಲೆಯು 2 ಮಿಲಿಯನ್ ರೂಪಾಯಿಗಳಿಂದ (24,400.66) ಪ್ರಾರಂಭವಾಗಲಿದೆ ಎಂದು ವರದಿ ತಿಳಿಸಿದೆ.ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳಿಗೆ ಕಾರುಗಳನ್ನು ರಫ್ತು ಮಾಡಲು ಯೋಜಿಸುತ್ತಿರುವುದರಿಂದ ಭಾರತವನ್ನು ರಫ್ತು ಮೂಲವಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.

ಕಳೆದ ತಿಂಗಳು ಮಸ್ಕ್ ಅವರೊಂದಿಗಿನ ಸಭೆಯಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಾರು ತಯಾರಕರನ್ನು ದೇಶದಲ್ಲಿ ಮಹತ್ವದ ಹೂಡಿಕೆ ಮಾಡಲು ಒತ್ತಾಯಿಸಿದ್ದರು.ಇದೀಗ ಮಸ್ಕ್ ಅವರು ಭಾರತ ಸರ್ಕಾರದೊಂದಿಗೆ ಕಾರು ಉತ್ಪದನಾ ಘಟಕವನ್ನು ಸ್ಥಾಪಿಸುವ ಕುರಿತಂತೆ ಮಾತುಕತೆ ನಡೆಸುತ್ತಿದ್ದು, ಕೆಲವೇ ವರ್ಷಗಳಲ್ಲಿ ಘಟಕ ಕಾರ್ಯರಂಭ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು