ದೀಪಾವಳಿ ಸಂಭ್ರಮದ ಬಗ್ಗೆ ಹೊಸದಾಗಿ ಹೇಳಬೇಕು ಎಂದಿಲ್ಲ. ಜಾತಿ, ಮತ ಬೇಧ ಇಲ್ಲದೆ ಎಲ್ಲೆಡೆ ಸಡಗರದ ದೀಪಾವಳಿ ಆಚರಿಸಲಾಗುತ್ತದೆ. ಎಲ್ಲರೂ ಮನೆಯಲ್ಲಿ ಹಬ್ಬದ ಆಚರಣೆಯಲ್ಲಿ ತೊಡಗಿರುತ್ತಾರೆ.
ಈ ಎಲ್ಲಾ ಕಾರಣಗಳಿಂದ ಹೆಚ್ಚುವರಿ ರೈಲು ಸೇವೆಯನ್ನು ಕೂಡ ಒದಗಿಸಲಾಗಿದೆ. ಸೌತ್ ಸೆಂಟ್ರಲ್ ರೈಲ್ವೇ ಹಬ್ಬದ ಸಂಭ್ರಮಕ್ಕೆ ವಿಶೇಷ ರೈಲು ಸೇವೆಗಳನ್ನು ಒದಗಿಸಲು ಸಿದ್ಧವಾಗಿದೆ. ಒಟ್ಟು ವಿಶೇಷ 18 ರೈಲುಗಳು ಸಂಚಾರ ಮಾಡಲಿವೆ.
ಬಹುತೇಕ ರೈಲುಗಳು ಈ ತಿಂಗಳ 28ನೇ ತಾರೀಖಿನಿಂದ ಆರಂಭವಾಗಿ ಈ ವರ್ಷದ ಅಂತ್ಯದ ವರೆಗೂ ಸಂಚಾರ ನಡೆಸಲಿವೆ. ಈ ಎಲ್ಲಾ ರೈಲು ಸೇವೆಗಳು ಸಂಪೂರ್ಣ ರಿಸರ್ವ್ಡ್ ಆಗಿರಲಿವೆ. ಈ ಬಗ್ಗೆ ಸೌತ್ ಸೆಂಟ್ರಲ್ ರೈಲ್ವೇ ಟ್ವೀಟ್ ಮೂಲಕ ಮಾಹಿತಿ ನೀಡಿದೆ.