News Karnataka Kannada
Friday, May 03 2024
ದೇಶ

ದೆಹಲಿ-ಕಾಬೂಲ್ ವಿಮಾನ ಸಂಚಾರ ರದ್ದು

Britan Plane 09082021
Photo Credit :


ಹೊಸದಿಲ್ಲಿ: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ಸಂಖ್ಯೆಯ ಜನ ಸೇರಿದ್ದು, ಅಲ್ಲಿನ ವಾಯು ಪ್ರದೇಶವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿ-ಕಾಬೂಲ್ ನಡುವಣ ಏರ್ ಇಂಡಿಯಾ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.
ಆಫ್ಘಾನಿಸ್ತಾನ ವಾಯು ಪ್ರದೇಶ ಬಂದ್ ಆಗಿರುವುದರಿಂದ, ಅಮೆರಿಕದಿಂದ ಬರುವ ಏರ್ ಇಂಡಿಯಾ ವಿಮಾನಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ಚಿಕಾಗೋ-ನವದೆಹಲಿ ಮತ್ತು ಸ್ಯಾನ್ ಫ್ರಾನ್ಸಿಸ್ಕೋ-ನವದೆಹಲಿ ಮಾರ್ಗದ ವಿಮಾನಗಳ ಹಾರಾಟದಲ್ಲಿ ಮಾರ್ಗ ಬದಲಿಸಲಾಗಿದ್ದು, ಶಾರ್ಜಾ ಮೂಲಕ ಇವು ಭಾರತಕ್ಕೆ ಆಗಮಿಸಲಿವೆ. ಭಾರತದಿಂದ ಅಮೆರಿಕಕ್ಕೆ ಹೋಗುವ ವಿಮಾನಗಳ ಮಾರ್ಗಗಳನ್ನೂ ಸಹ ಬದಲಾವಣೆ ಮಾಡಲಾಗುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು