ಮಧ್ಯಪ್ರದೇಶ : ಬರೋಬ್ಬರಿ 17 ತಿಂಗಳ ನಂತರ ಮಧ್ಯಪ್ರದೇಶ ಸರ್ಕಾರ 1-5 ತರಗತಿಗಳನ್ನು ಭೌತಿಕವಾಗಿ ಆರಂಭಿಸಲು ನಿರ್ಧರಿಸಿದೆ. ಸೆ.20 ರಿಂದ ತರಗತಿಗಳು ಶೇ.50ರಷ್ಟು ಹಾಜರಾತಿಯೊಂದಿಗೆ ಆರಂಭವಾಗಲಿವೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಶಾಲೆ ಆರಂಭಿಸುವುದರ ಜೊತೆಗೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಲಾಗಿದೆ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಬಯಸದಿದ್ದರೆ ಆನ್ಲೈನ್ ತರಗತಿ ಮುಂದುವರಿಸಬಹುದಾಗಿದೆ. ಎಲ್ಲಾ ಶಾಲಾ ಸಿಬ್ಬಂದಿಗೆ ಲಸಿಕೆ ಕಡ್ಡಾಯವಾಗಿದ್ದು, ಬೆಂಚು, ಕ್ಲಾಸ್ರೂಂ ದಿನವೂ ಸ್ಯಾನಿಟೈಸ್ ಮಾಡಬೇಕಿದೆ.