News Karnataka Kannada
Monday, April 29 2024
ದೇಶ

ಮುಂಬೈ : ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚನೆ

Mass Rape 15 7 21
Photo Credit :

ಮುಂಬೈ :  ಮುಂಬೈನಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಚ್ಚೆತ್ತುಕೊಂಡ ಮುಂಬೈ ಪೊಲೀಸರು ಮಹಿಳೆಯರ ರಕ್ಷಣೆಗಾಗಿ ನಿರ್ಭಯಾ ದಳ ರಚಿಸಿದ್ದಾರೆ.

ಏನಿದು ನಿರ್ಭಯಾ ದಳ?
ಪೊಲೀಸರು ಮಾಡಿಕೊಂಡಿರುವ ತಂಡಕ್ಕೆ ನಿರ್ಭಯಾ ದಳ ಎಂದು ಹೆಸರಿಡಲಾಗಿದೆ. ಈ ತಂಡದಲ್ಲಿ ಪಿಎಸ್‌ಐ ಅಥವಾ ಎಎಸ್‌ಐ ರ‍್ಯಾಂಕ್‌ನ ಮಹಿಳಾ ಪೊಲೀಸ್ ಅಧಿಕಾರಿ, ಒಬ್ಬ ಪುರುಷ ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿ, ಒಬ್ಬ ಡ್ರೈವರ್ ಇರಲಿದ್ದಾರೆ.

ನಿರ್ಭಯಾ ಪ್ರಕರಣವನ್ನು ಹೋಲುವಂತ ಭೀಕರ ಅತ್ಯಾಚಾರ ಕೊಲೆ ಪ್ರಕರಣ ನಡೆದ ನಂತರ ಸರ್ಕಾರದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಮುಂಬೈ ಮಹಿಳೆಯರಿಗೆ ಸುರಕ್ಷಿತ ನಗರಗಳಲ್ಲಿ ಒಂದಾಗಿದೆ. ಈ ನಗರದಲ್ಲೇ ಅತ್ಯಾಚಾರ ನಡೆದಿರುವುದು ಕ್ರೂರ ಘಟನೆಯಾಗಿದ್ದು, ಮಹಿಳೆಯರ ಸಹಾಯಕ್ಕೆ ಪೊಲೀಸ್ ನಿರ್ಭಯಾ ದಳವನ್ನು ರಚಿಸಿದೆ.

ನಿರ್ಭಯಾ ದಳ ತಂಡ ಪ್ರತಿ ಪೊಲಿಸ್ ಠಾಣೆಯಲ್ಲೂ ಇರಲಿದೆ. ಈ ತಂಡಕ್ಕೆ ಮೊಬೈಲ್-5 ವಾಹನವನ್ನು ನೀಡಲಾಗುವುದು. ನಿರ್ಭಯಾ ದಳದ ತಂಡದವರಿಗೆ ಎರಡು ದಿನಗಳ ತರಬೇತಿ ನೀಡಲಾಗುವುದು. ಈ ದಳವು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಿ ಮಹಿಳಾ ರಕ್ಷಣೆ ಬಗ್ಗೆ ತಿಳಿಸಿಕೊಡುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು