Bengaluru 23°C
Ad

ಸೌಂದರ್ಯ ಸ್ಪರ್ಧೆಯ ವಿಜೇತರಿಬ್ಬರೂ ರಾಜೀನಾಮೆ : ಇದಕ್ಕೆ ಕಾರಣ ಇಲ್ಲಿದೆ

ಯುಎಸ್‌ಎಯ ಪ್ರಸಿದ್ಧ ಸೌಂದರ್ಯ ಸ್ಪರ್ಧೆ ವಿಜೇತರಿಬ್ಬರು ರಾಜೀನಾಮೆ ನೀಡಿದ್ದು ಕಾರಣ ನಿಗೂಢವಾಗಿದೆ.ಇತ್ತೀಚೆಗೆ ಮಿಸ್ USA 2023 ಪ್ರಶಸ್ತಿಯನ್ನು ಪಡೆದ ಸ್ಪರ್ಧಿ ನೋಲಿಯಾ ವೊಯ್ಗ್ಟ್ ರಾಜೀನಾಮೆ ನೀಡಿದ ಬೆನ್ನಲ್ಲೇ ಮಿಸ್ ಟೀನ್ ಯುಎಸ್​ಎ ವಿಜೇತೆಯಾಗಿದ್ದ ಉಮಾಸೋಫಿಯಾ ಶ್ರೀವಾಸ್ತವ ಕೂಡ ರಾಜೀನಾಮೆ ನೀಡಿದ್ದಾರೆ.ಈ ಬಗ್ಗೆ ಅವರು ಇನ್​ಸ್ಟಾಗ್ರಾಂನಲ್ಲಿ ದೊಡ್ಡ ಪೋಸ್ಟ್​ ಒಂದನ್ನು ಹಾಕಿದ್ದಾರೆ.

ಅಮೇರಿಕಾ : ಯುಎಸ್‌ಎಯ ಪ್ರಸಿದ್ಧ ಸೌಂದರ್ಯ ಸ್ಪರ್ಧೆ ವಿಜೇತರಿಬ್ಬರು ರಾಜೀನಾಮೆ ನೀಡಿದ್ದು ಕಾರಣ ನಿಗೂಢವಾಗಿದೆ.ಇತ್ತೀಚೆಗೆ ಮಿಸ್ USA 2023 ಪ್ರಶಸ್ತಿಯನ್ನು ಪಡೆದ ಸ್ಪರ್ಧಿ ನೋಲಿಯಾ ವೊಯ್ಗ್ಟ್ ರಾಜೀನಾಮೆ ನೀಡಿದ ಬೆನ್ನಲ್ಲೇ ಮಿಸ್ ಟೀನ್ ಯುಎಸ್​ಎ ವಿಜೇತೆಯಾಗಿದ್ದ ಉಮಾಸೋಫಿಯಾ ಶ್ರೀವಾಸ್ತವ ಕೂಡ ರಾಜೀನಾಮೆ ನೀಡಿದ್ದಾರೆ.ಈ ಬಗ್ಗೆ ಅವರು ಇನ್​ಸ್ಟಾಗ್ರಾಂನಲ್ಲಿ ದೊಡ್ಡ ಪೋಸ್ಟ್​ ಒಂದನ್ನು ಹಾಕಿದ್ದಾರೆ.

ನೋಲಿಯಾ ಮೇ 9ರಂದು ಬರೆದ ಪತ್ರದ ಪ್ರಕಾರ, ಈ ಸ್ಪರ್ಧೆಯ ಸಿಇಒ ಲೈಂಗಿಕ ಕಿರುಕುಳದ ಘಟನೆಯನ್ನು ತಪ್ಪಾಗಿ ನಿರ್ವಹಿಸಿದ್ದಾರೆ. ಸ್ಪರ್ಧೆಯ ಸ್ಥಳದಲ್ಲಿ ಉತ್ತಮ ಕೆಲಸದ ವಾತಾವರಣವನ್ನು ಸೃಷ್ಟಿಸಿಲ್ಲ ಎಂದು ವೊಯ್ಗ್ಟ್ ಆರೋಪಿಸಿದ್ದಾರೆ.“ಮಿಸ್ USA ಸಂಸ್ಥೆಯೊಳಗೆ ವಿಷಕಾರಿ ಕೆಲಸದ ವಾತಾವರಣವಿದೆ, ಅದು ಕಳಪೆ ನಿರ್ವಹಣೆಯಾಗಿದೆ. ಅಲ್ಲಿ ಕಿರುಕುಳ ನೀಡಲಾಗುತ್ತದೆ” ಎಂದು 24 ವರ್ಷದ ನೋಲಿಯಾ ಪತ್ರದಲ್ಲಿ ಬರೆದಿದ್ದಾರೆ.

ಮಿಸ್ USA ಆಗಿ ನನ್ನ ಪ್ರಯಾಣವು ನಂಬಲಾಗದಷ್ಟು ಅರ್ಥಪೂರ್ಣವಾಗಿದೆ. ನಾನು ಬಹಳ ಹೆಮ್ಮೆಯಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ದುಃಖಕರವೆಂದರೆ, ಮಿಸ್ USA 2023 ಪ್ರಶಸ್ತಿಗೆ ರಾಜೀನಾಮೆ ನೀಡಲು ನಾನು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ನೋಲಿಯಾ ತಿಳಿಸಿದ್ದರು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು.

ಇವರ ಬೆನ್ನಲ್ಲೇ ಮಿಸ್ ಟೀನ್ ಯುಎಸ್​ಎ ವಿಜೇತೆ ಉಮಾಸೋಫಿಯಾ ಶ್ರೀವಾಸ್ತವ ಕೂಡ ರಾಜೀನಾಮೆ ನೀಡುವ ಮೂಲಕ ಈ ಸ್ಪರ್ಧೆಯ ಬಗ್ಗೆ ತೀವ್ರ ಚರ್ಚೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹಲವು ತಿಂಗಳ ಕಾಲ ಗೊಂದಲದಲ್ಲಿದ್ದ ನಾನು ಕೊನೆಗೂ ಗಟ್ಟಿ ನಿರ್ಧಾರ ಮಾಡಿ ಮಿಸ್ ಟೀನ್ USA 2023 ಪ್ರಶಸ್ತಿಗೆ ರಾಜೀನಾಮೆ ನೀಡುವ ಆಯ್ಕೆಯನ್ನು ಮಾಡಿದ್ದೇನೆ ”ಎಂದು ಅವರು ಇನ್‌ಸ್ಟಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದಾರೆ.

 

Ad
Ad
Nk Channel Final 21 09 2023
Ad