Ad

ಐಸಿಸಿ ಟಿ20 ವಿಶ್ವಕಪ್: ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ

Crickt

ಗಯಾನ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಂದು ಭಾರತದ ವಿರುದ್ಧ ನಡೆಯುತ್ತಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿದೆ.

Ad
300x250 2

ಈ ಮೊದಲು ಭಾರತೀಯ ಕಾಲಮಾನ 7.30ಕ್ಕೆ ಟಾಸ್ ನಿಗದಿಯಾಗಿತ್ತು. ಆದರೆ ಮಳೆ ಹಾಗೂ ಒದ್ದೆಯಾದ ಮೈದಾನದಿಂದಾಗಿ ಪಂದ್ಯ ಆರಂಭವು ವಿಳಂಬಗೊಂಡಿತು.

ಭಾರತೀಯ ಕಾಲಮಾನ 8.50ಕ್ಕೆ ಟಾಸ್ ಹಾಕಲಾಯಿತು. ರಾತ್ರಿ 9.15ಕ್ಕೆ ಪಂದ್ಯ ಆರಂಭವಾಗಿದೆ. ಅಲ್ಲದೆ ಓವರ್‌ಗಳ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಭಾರತ ತಂಡದಲ್ಲಿ ಯಾವುದೇ ಬದಲಾವಣೆಯಿಲ್ಲ.

ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿರುವ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ತರಲಾಗಿಲ್ಲ. ಇದರಿಂದಾಗಿ ಸಂಜು ಸ್ಯಾಮ್ಸನ್, ಯಜುವೇಂದ್ರ ಚಾಹಲ್ ಹಾಗೂ ಯಶಸ್ವಿ ಜೈಸ್ವಾಲ್ ಅವಕಾಶ ವಂಚಿತರಾಗಿದ್ದಾರೆ. ಈ ಪಂದ್ಯದಲ್ಲಿ ಗೆದ್ದ ತಂಡವು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಸವಾಲನ್ನು ಎದುರಿಸಲಿದೆ.

Ad
Ad
Nk Channel Final 21 09 2023
Ad