News Karnataka Kannada
Sunday, April 28 2024
ವಿದೇಶ

ರಾಯಭಾರಿ ಮಗಳನ್ನು ಅಪಹರಿಸಿ ಹಿಂಸೆ ; ಜಾಗತಿಕವಾಗಿ ಪಾಕಿಸ್ಥಾನಕ್ಕೆ ತೀವ್ರ ಮುಖಭಂಗ

Pakistan 19 7 21
Photo Credit :

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ  ದುಷ್ಕರ್ಮಿಗಳು  ಆಫ್ಘಾನಿಸ್ತಾನದ ರಾಯಭಾರಿಯ ಮಗಳನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ ಘಟನೆಯಿಂದ ಅಫ್ಘಾನಿಸ್ಥಾನ ಕೆಂಡಾಮಂಡಲವಾಗಿದೆ. ಈ ಘಟನೆಯ ನಂತರ ಪಾಕಿಸ್ತಾನ ಜಾಗತಿಕವಾಗಿ ತೀವ್ರ ಮುಖಭಂಗ ಅನುಭವಿಸುವಂತಾಗಿದ್ದು, ತಲೆತಗ್ಗಿಸುವಂತಾಗಿದೆ.
ಕಳೆದ ಜುಲೈ 16ರಂದು ಅಫ್ಘಾನಿಸ್ತಾನದ ರಾಯಭಾರಿಯ ಮಗಳಾದ ಸಿಲ್‌ಸಿಲಾ ಅಲಿಖಿಲ್ ಅವರನ್ನು ಅಪಹರಣ ಮಾಡಲಾಗಿತ್ತು. ಅವರು ತಮ್ಮ ಮನೆಗೆ ತೆರಳುತ್ತಿದ್ದ ಮಾರ್ಗಮಧ್ಯೆ ಅಪರಿಚಿತರು ಅವರನ್ನು ಅಪಹರಿಸಿ ​ ಮಾಡಿ ಚಿತ್ರಹಿಂಸೆ ನೀಡಿದ್ದರು. ಅಪಹರಣಕಾರರಿಂದ ಬಿಡುಗಡೆ ಹೊಂದಿದ ಬಳಿಕ ಸಿಲ್‌ಸಿಲಾ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಅಪಹರಣದಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಅಫ್ಘಾನಿಸ್ತಾನ, ಪಾಕಿಸ್ತಾನದಲ್ಲಿರುವ ತನ್ನ ರಾಯಭಾರಿ ಮತ್ತು ಹಿರಿಯ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿದೆ. ಎಲ್ಲಾ ಭದ್ರತಾ ಬೆದರಿಕೆಗಳನ್ನು ಪರಿಹರಿಸುವವರೆಗೆ ಆಫ್ಘಾನಿಸ್ತಾನದ ರಾಯಭಾರಿ ಮತ್ತು ಪಾಕಿಸ್ತಾನದ ಹಿರಿಯ ರಾಜತಾಂತ್ರಿಕರನ್ನು ಆಫ್ಘನ್ ಸರ್ಕಾರ ವಾಪಸ್ ಕರೆಸಿಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಎದುರಾಗಿದೆ. ಪಾಕಿಸ್ತಾನಕ್ಕೆ ಅಫ್ಘನ್ ನಿಯೋಗವು ಶೀಘ್ರದಲ್ಲೇ ಭೇಟಿ ನೀಡಲಿದ್ದು, ಈ ಪ್ರಕರಣ ಮತ್ತು ಎಲ್ಲಾ ಸಂಬಂಧಿತ ಸಮಸ್ಯೆಗಳ ಚರ್ಚೆಗೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು