News Karnataka Kannada
Tuesday, April 30 2024
ಕಾಸರಗೋಡು

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಕಾಸರಗೋಡಿನಲ್ಲಿ ಮೂವರ ಬಂಧನ

Arres Terrorist 12072021
Photo Credit :

ಕಾಸರಗೋಡು: ಅಪ್ರಾಪ್ತ ಬಾಲಕಿಯ  ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಸರಗೋಡು ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಐದು ಮಂದಿಯನ್ನು ಈ ಹಿಂದೆ ಬಂಧಿಸಲಾಗಿತ್ತು.

ಉಳಿಯತ್ತಡ್ಕ ಪರಿಸರದ  ಬಾಡಿಗೆ ಮನೆಯೊಂದರಲ್ಲಿ ೧೬ ವರ್ಷದ  ಬಾಲಕಿಯ ಮೇಲೆ  ನಡೆದ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಬಂಧಿಸಲಾಗಿದೆ.

ಉಳಿಯತ್ತಡ್ಕ ಪಳ್ಳದ ಅಬ್ದುಲ್ ಅಝೀಜ್ ( ೩೮) ,  ಕೂಡ್ಲು  ಕಾನಂತಿಗರೆಯ   ಸುಬ್ಬ ( ೫೮) ಮತ್ತು ಉಳಿಯತ್ತಡ್ಕದ   ವಾಸುದೇವ ಗಟ್ಟಿ ( ೫೦) ಬಂಧಿತರು . ಇದರಿಂದ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ಎಂಟಕ್ಕೇರಿದೆ.

ಎರಡು ವರ್ಷಗಳಿಂದ ಬಾಲಕಿಗೆ ಆಮಿಷ ನೀಡಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ದೂರು ದಾಖಲಾಗಿತ್ತು .  ಚೈಲ್ಡ್ ಲೈನ್  ಅಧಿಕಾರಿಗೆ ಲಭಿಸಿದ  ದೂರಿನಂತೆ  ಬಾಲಕಿಯಿಂದ  ಮಾಹಿತಿ ಕಲೆ  ಹಾಕಿದ ಪೊಲೀಸರು ಕೃತ್ಯವನ್ನು ಬಯಲಿಗೆ ತರುವಲ್ಲಿ ಯಶಸ್ವಿ ಯಾಗಿದ್ದು , ಹೆಚ್ಚಿನ ತನಿಖೆ ನಡೆಯುತ್ತಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು