ಪೂಂಚ್(ಜಮ್ಮು-ಕಾಶ್ಮೀರ): ಪಾಕ್ ನಡೆಸಿದ ಅಪ್ರಚೋದಿತ ದಾಳಿಗೆ ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಸೇನೆಯ ಮೂಲಗಳು ತಿಳಿಸಿದೆ.
ಜಿಲ್ಲೆಯ ಶಾಹ್ಪುರ್ ಪ್ರದೇಶದಲ್ಲಿರುವ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಈ ಘಟನೆ ನಡೆದಿದೆ.
ಹುತಾತ್ಮ ಯೋಧನನನ್ನು ರಾಜಸ್ಥಾನ ಮೂಲದವಾರಗಿದ್ದು ಹರಿ ವಾಕೆರ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಅವರನ್ನು ಕೂಡಲೇ ಸೇನಾ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಪಾಕ್ ಸೈನಿಕರು ಶುಕ್ರವಾರವೂ ಅಪ್ರಚೋದಿತ ದಾಳಿ ನಡೆಸಿದ್ದರು.