News Karnataka Kannada
Saturday, May 04 2024
ವಿದೇಶ

ಭಾರತದಲ್ಲಿ ಕೋವಿಡ್ ಪ್ರಕರಣ ದಾಖಲಾಗಿ ಇಂದಿಗೆ ಒಂದು ವರ್ಷ

Photo Credit :

ಭಾರತದಲ್ಲಿ ಕೋವಿಡ್ ಪ್ರಕರಣ ದಾಖಲಾಗಿ ಇಂದಿಗೆ ಒಂದು ವರ್ಷ

ನವದೆಹಲಿ: ಒಂದು ವರ್ಷ ಕಳೆದ ಕೋವಿಡ್ ಪ್ರಕರಣಗಳ ಏರಿಕೆಯ ಹೇಳಿಕೆಗಳ ಗ್ರಾಫ್. ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ದೇಶದಲ್ಲಿ ಧೃಡಪಟ್ಟ ಮೊದಲ ಕೋವಿಡ್ ಪ್ರಕರಣ ಕೇರಳದಲ್ಲಿ ದಾಖಲಾಗಿತ್ತು.

ಒಟ್ಟು ಪ್ರಕರಣಗಳ ಸಂಖ್ಯೆ 9,23,912 ತಲುಪಿದ್ದು, ಈ ಪೈಕಿ 8,48,476 ಜನ ಗುಣಮುಖರಾಗಿದ್ದಾರೆ ಹಾಗೂ ಪ್ರಸ್ತುತ ಇಂಗ್ಲೆಂಡ್‌ನಿಂದ ಬಂದವರೂ ಸೇರಿದಂತೆ 71,469 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ಕೇರಳದಲ್ಲಿ 6,282 ಹೊಸ ಪ್ರಕರಣಗಳು ದಾಖಲಾಗಿದ್ದು, 7,032 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೂ ಸಾವಿನ ಸಂಖ್ಯೆ ಶೇ 0.4ಕ್ಕೆ ಇಳಿಕೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ತಿಳಿಸಿದ್ದಾರೆ.

ಕೇರಳದ ತ್ರಿಶ್ಯೂರ್ ಜಿಲ್ಲೆಯ ಕೊಡುಂಗಲ್ಲೂರು ಗ್ರಾಮದಲ್ಲಿನ ಕುಟುಂಬವೊಂದರ 20ರ ಹರೆಯದ ಯುವತಿ ಚೀನಾದ ವುಹಾನ್‌ನಲ್ಲಿ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿದ್ದರು.ಕಳೆದ ವರ್ಷ ಜನವರಿ 30ಕ್ಕೆ ಕೋವಿಡ್‌ಗೆ ತುತ್ತಾಗಿದ್ದ ಆ ಯುವತಿ ದೇಶದ ಮೊದಲ ಕೋವಿಡ್ ರೋಗಿಯಾಗಿದ್ದರು. ಪ್ರಸ್ತುತ, ಯುವತಿ ಈಗ ಕೋವಿಡ್‌ನಿಂದ ಚೇತರಿಸಿಕೊಂಡು ಒಂದು ವರ್ಷವಾಗಿದೆಯಾದರೂ, ಯುವತಿಯ ಕುಟುಂಬಕ್ಕೆ ಕೋವಿಡ್‌ನ ನೆನಪುಗಳು ಇಂದಿಗೂ ಮಾಸಿಲ್ಲ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು