News Karnataka Kannada
Sunday, May 05 2024
ವಿದೇಶ

ನವದೆಹಲಿ: ಮಹಿಳೆಯರ ತಲೆಕೂದಲು ಕಳ್ಳತನ

Photo Credit :

ನವದೆಹಲಿ: ಮಹಿಳೆಯರ ತಲೆಕೂದಲು ಕಳ್ಳತನ

ನವದೆಹಲಿ: ಇಲ್ಲಿಯವರೆಗೆ ಕಳ್ಳರು ಚಿನ್ನ, ಹಣ, ಬೆಳ್ಳಿ ಮತ್ತು ಬ್ಯಾಂಕ್ ಗಳಿಗೆ ಕಣ್ಣ ಹಾಕಿ ದರೋಡೆ ಮಾಡುತ್ತಿದ್ದರು. ಆದರೆ ಇದೀಗ ಕಳ್ಳರು ಮಹಿಳೆಯರ ತಲೆಗೂದಲಿನ ಮೇಲೆ ಕಣ್ಣು ಹಾಕಿದ್ದಾರೆ. ಕಳೆದ ಕೆಲ ದಿನಗಳಿಂದ ನವದೆಹಲಿಯಲ್ಲಿ ಇಂತಹ ಪ್ರಕರಣಗಳು ದಾಖಲಾಗುತ್ತಿವೆ. ಗುರುವಾರ ಸಹ ಮೂವರು ಮಹಿಳೆಯರ ತಲೆಗೂದಲು ಕತ್ತರಿಸಿ ತೆಗೆದುಕೊಂಡು ಹೋಗಿದ್ದಾರೆ. ಮಹಿಳೆಯರು ಮಲಗಿದ್ದ ವೇಳೆ ಅವರ ತಲೆಗೂದಲು ಕತ್ತರಿಸಿ ಕಳ್ಳತನ ಮಾಡಿದ್ದಾರೆ. ಇದೀಗ ಜನರಲ್ಲಿ ಇದೆಲ್ಲ ಮಾಟ ಮಂತ್ರದ ಹಿಂದೆ ಇರುವ ತಂತ್ರ ಅನ್ನೋ ಭಾವನೆ ಹುಟ್ಟಿಕೊಂಡಿದೆ. ಕೆಲವು ದಿನಗಳ ಹಿಂದೆ ವ್ಯಕ್ತಿಯೊಬ್ಬ ಮಹಿಳೆಯ ಪ್ರಜ್ಞೆ ತಪ್ಪಿಸಿ ಆಕೆಯ ತಲೆಕೂದಲನ್ನು ಕತ್ತರಿಸಿ ಹೋಗಿದ್ದ. ಇದೀಗ ನಗರದಲ್ಲಿ ಮೂವರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುರ್ಗಾಂವ್, ಪಲ್ವಾಲ್ ಮತ್ತು ಹರಿಯಾಣದ ಮೇವತ್ನಲ್ಲೂ ಇಂಥದ್ದೇ ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು