ಪಣಜಿ: ಗೋವಾದ ನೂತನ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಬುಧವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾಗಿದೆ.
ಗೋವಾ ವಿಧಾನಸಭೆಯ ಸ್ಪೀಕರ್ ಆಗಿ ಗೋವಾ ಫಾರ್ವಡ್ ಪಾರ್ಟಿಯ ವಿಜಯಿ ಸರ್ದೇಸಾಯಿ ಮತ್ತು ಮಹಾರಾಷ್ಟ್ರವಾದಿ ಗೋಮಂತಕ್ ಪಾರ್ಟಿ ಸುದಿನ ಧಾವಲಿಕರ್ ಉಪಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿರುವರು.
ಅನಾರೋಗ್ಯದಿಂದ ನಿಧನರಾದ ಗೋವಾ ಮುಖ್ಯಮಂತ್ರಿ ಮನೋಹರ್ ಪಾರೀಕ್ಕರ್ ಅವರ ಜಾಗಕ್ಕೆ ಸಾವಂತ್ ಅವರನ್ನು ಆಯ್ಕೆ ಮಾಡಲಾಗಿದೆ. ಬುಧವಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಬೇಕಾಗಿದೆ.
40 ಸದಸ್ಯ ಬಲದ ಗೋವಾ ವಿಧಾನಸಭೆಯು ಈಗ 36ಕ್ಕೆ ಕುಸಿದಿದೆ. ಇಬ್ಬರು ಬಿಜೆಪಿ ಶಾಸಕರು ಮೃತಪಟ್ಟರೆ, ಕಾಂಗ್ರೆಸ್ ನ ಇಬ್ಬರು ರಾಜೀನಾಮೆ ಸಲ್ಲಿಸಿದ್ದಾರೆ.
ಗೋವಾದಲ್ಲಿ 14 ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಬಹುದೊಡ್ಡ ಪಕ್ಷವಾಗಿದೆ. ಬಿಜೆಪಿ 12 ಸ್ಥಾನ ಪಡೆದಿದೆ. ಆದರೆ ತಲಾ ಮೂವರು ಶಾಸಕರನ್ನು ಹೊಂದಿರುವ ಎಂಜಿಪಿ ಮತ್ತು ಜಿಎಫ್ ಪಿ ಜತೆ ಮೈತ್ರಿ ಮಾಡಿದೆ. ಮೂರು ಮಂದಿ ಪಕ್ಷೇತರ ಶಾಸಕರು ಮತ್ತು ಒಬ್ಬರು ಎನ್ ಸಿಪಿ ಶಾಸಕರಿದ್ದಾರೆ.