ಪಣಜಿ: ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಕೊರೋನಾ ಪಾಸಿಟಿವ್ ಆಗಿರುವುದಾಗಿ ಬುಧವಾರ ಮಾಹಿತಿ ನೀಡಿರುವರು.
ಅವರಿಗೆ ಕೊರೋನಾದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಮತ್ತು ಈಗ ಹೋಮ್ ಐಸೋಲೇಷನ್ ನಲ್ಲಿರುವರು.
ಪರೀಕ್ಷೆಯಲ್ಲಿ ನನಗೆ ಕೊರೋನಾ ಪಾಸಿಟಿವ್ ಬಂದಿದೆ ಮತ್ತು ನನಗೆ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಹೀಗಾಗಿ ನಾನು ಹೋಮ್ ಐಸೋಲೇಷನ್ ನಲ್ಲಿ ಇದ್ದೇನೆ ಎಂದು ಸಾವಂತ್ ಅವರು ಟ್ವೀಟ್ ಮಾಡಿರುವರು.
ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ನನ್ನ ಸಂಪರ್ಕಕ್ಕೆ ಬಂದಿರುವವರು ತಕ್ಷಣವೇ ಪರೀಕ್ಷೆಗೆ ಒಳಪಡಬೇಕು ಎಂದು ಅವರು ಹೇಳಿದರು.