News Karnataka Kannada
Monday, May 06 2024
ವಿದೇಶ

ಖಾಸಗಿ ಆಸ್ಪತ್ರೆಗಳಲ್ಲಿ ರೂ.250 ಪಾವತಿಸಿ ಕೋವಿಡ್ ಲಸಿಕೆ ಪಡೆಯಬಹುದು

Photo Credit :

ಖಾಸಗಿ ಆಸ್ಪತ್ರೆಗಳಲ್ಲಿ ರೂ.250 ಪಾವತಿಸಿ ಕೋವಿಡ್ ಲಸಿಕೆ ಪಡೆಯಬಹುದು

ಮಹಾರಾಷ್ಟ್ರ: ಸಿಇಒ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಫೆಬ್ರವರಿ 26 ರಂದು ನಡೆದ ಕೋ-ವಿನ್ 2.0 ಕುರಿತ ತರಬೇತಿ ಮತ್ತು ವರ್ಚುವಲ್ ಸಭೆಯಲ್ಲಿ ಸೇವಾ ಶುಲ್ಕವನ್ನು ತಿಳಿಸಲಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಕಾರ್ಯದರ್ಶಿ ಡಾ. ಪ್ರದೀಪ್ ವ್ಯಾಸ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಕೋವಿಡ್ ವ್ಯಾಕ್ಸಿನೇಷನ್ ಕೇಂದ್ರಗಳಾಗಿ ಕಾರ್ಯನಿರ್ವಹಿಸುವ ಖಾಸಗಿ ಆಸ್ಪತ್ರೆಗಳು ವಸೂಲಿ ಮಾಡಬೇಕಾದ ಸೇವಾ ಶುಲ್ಕವನ್ನು ಪ್ರತಿ ಡೋಸ್‌ಗೆ 100 ರೂ . ನಿಗದಿ ಪಡಿಸಲಾಗಿದ್ದು, ಇದಲ್ಲದೆ ಖಾಸಗಿ ಆಸ್ಪತ್ರೆಗಳು ಲಸಿಕೆ ವೆಚ್ಚವಾಗಿ ಪ್ರತಿ ಡೋಸ್‌ಗೆ 150 ರೂ . ತೆಗೆದುಕೊಳ್ಳುತ್ತಿದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳು ವಸೂಲಿ ಮಾಡಬಹುದಾದ ಒಟ್ಟು ಸೀಲಿಂಗ್ ಮೊತ್ತವು ಪ್ರತಿ ಡೋಸ್‌ಗೆ 250 ರೂ . ‘ ಎಂದು ಡಾ ವ್ಯಾಸ್ ಹೇಳಿದರು .

ಈ ಕೋವಿಡ್ ಲಸಿಕೆ ಅಭಿಯಾನಕ್ಕೆ ಉತ್ತೇಜನ ನೀಡಬೇಕಾಗಿ ಖಾಸಕಿ ಆಸ್ಪತ್ರೆಗಳಿಗೆ ಮನವಿ ಮಾಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಆರೋಗ್ಯ ಮಿಷನ್ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕ ವಂದನಾ ಗುರ್ನಾನಿ , “ಈ ಆದೇಶವು ಮುಂದೆ ನೀಡಲಿರುವ ಹೊಸ ಆದೇಶದವರೆಗೆ ಜಾರಿಯಲ್ಲಿರಲಿದೆ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು