ಉಕ್ರೇನ್: ಉಕ್ರೇನ್ ಇಂಟರ್ ನ್ಯಾಷನಲ್ ಏರ್ ಲೈನ್ಸ್ ನ ಬೋಯಿಂಗ್ 737 ಪತಗೊಂಡು 9 ಸಿಬ್ಬಂದಿ ಸೇರಿದಂತೆ 177 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಟೆಹರಾನ್ ವಿಮಾನ ನಿಲ್ದಾಣದಿಂದ ಬುಧವಾರ ನಸುಕಿನ ವೇಳೆ ಟೇಕ್ ಆಫ್ ಆಗಿದ್ದ ವಿಮಾನವು ಕೀವ್ ಗೆ ಬೆಳಿಗ್ಗೆ 8ಕ್ಕೆ ಲ್ಯಾಂಡ್ ಆಗಬೇಕಿತ್ತು. ತಾಂತ್ರಿಕ ಕಾರಣಗಳಿಂದ ಪತನಗೊಂಡಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಕ್ರೇನ್ ಅಧ್ಯಕ್ಷ ವೊಲೊದ್ಯ್ಮಿರ್ ಝಿಲೆಂಸ್ಕಿ ಅವರು ಪ್ರಕಟನೆಯಲ್ಲಿ, ಪ್ರಾಥಮಿಕ ತನಿಖೆಯಲ್ಲಿ ಎಲ್ಲ ಪ್ರಯಾಣಿಕರು ಹಾಗೂ ವೈಮಾನಿಕ ಸಿಬ್ಬಂದಿ ಅಸುನೀಗಿದ್ದಾರೆ ಎಂದು ಹೇಳಿದ್ದಾರೆ.