ಮುಂಬೈ : ಕೊರೋನ ಮಹಮರಿ ಕಾರಣದಿಂದಾಗಿ ದೇಶದಲ್ಲಿ ಮಾಸ್ ಕತ್ತರಿಸುವುದು ಕಡ್ಡಾಯವಾಗಿದೆ. ಆದರೆ ಇದನ್ನು ಉಲ್ಲಂಘಿಸಿ ಅನೇಕರು ಮಾಸ್ಕ್ ಇಲ್ಲದೆ ಮನೆಯಿಂದ ಹೊರಬಂದು ಪೊಲೀಸರಿಗೆ ದಂಡ ಕಟ್ಟುವ ಪ್ರಕರಣಗಳು ದಿನನಿತ್ಯ ಕಂಡುಬರುತ್ತದೆ.
ಮುಂಬೈ ಮಹಾನಗರದಲ್ಲಿ ಮಾಸ್ಕ್ ಧರಿಸದೆ ಕಾನೂನು ಉಲ್ಲಂಘಿಸಿದವರಿಂದ ಭಾರೀ ಮೊತ್ತದ ಹಣವನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ . 55 ಕೋಟಿ ರೂಪಾಯಿಗಿಂತಲೂ ಹೆಚ್ಚು ಮೊತ್ತವನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಗಿದೆ . ಇದು ಬಹುಶಃ ದೇಶದಲ್ಲಿಯೇ ಅತ್ಯಧಿಕ ದಂಡವಾಗಿರುವ ಸಾಧ್ಯತೆ ಕೂಡ ಇದೆ .
ಮಾರಕ ಕೊರೋನಾದಿಂದ ತತ್ತರಿಸಿದ್ದ ಮುಂಬೈ ಮಹಾನಗರದಲ್ಲಿ ಪರಿಸ್ಥಿತಿ ಇದೀಗ ನಿಯಂತ್ರಣಕ್ಕೆ ಬಂದಿದೆ . ಕೊರೋನಾ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ವರದಿಗಳು ತಿಳಿಸಿವೆ.