ಒಡಿಸ್ಸಾ: ಫ್ಯಾನಿ ಚಂಡಮಾರುತವು ಒಡಿಸ್ಸಾದಲ್ಲಿ ಭಾರೀ ಅನಾಹುತವನ್ನು ಉಂಟು ಮಾಡಿದ್ದು, ಈಗಾಗಲೇ ಮೂರು ಮಂದಿಯನ್ನು ಬಲಿ ತೆಗೆದುಕೊಂಡಿದೆ.
ಇಂದು ಬೆಳಗ್ಗೆ ಎಂಟು ಗಂಟೆಗೆ ಚಂಡಮಾರುತವು ಒಡಿಸ್ಸಾಗೆ ಬಡಿದಿದ್ದು, ಗಂಟೆಗೆ ಸುಮಾರು 180 ಕಿ.ಮೀ.ವೇಗದ ಗಾಳಿಯೊಂದಿಗೆ ಭಾರೀ ಮಳೆಯಾಗಿದೆ.
ಒಡಿಸ್ಸಾದಲ್ಲಿ ಭಾರೀ ಮಳೆಯಾಗುತ್ತಿದ್ದು, ಚಂಡಮಾರುತದ ಪ್ರಭಾವವು ತಗ್ಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಈಗಾಗಲೇ ಸುಮಾರು 11.5 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. ಒಡಿಸ್ಸಾದಲ್ಲಿ ಚಂಡಮಾರುತದಿಂದ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದೆ.