ಕಾಬೂಲ್: ಕಾಬೂಲ್ನ ಅವಳಿ ಸ್ಫೋಟದ ಸಾವುಗಳಿಗೆ ಸೇಡು ತೀರಿಸಿಕೊಳ್ಳುತ್ತೇವೆ. ದಾಳಿ ನಡೆಸಿರುವ ಉಗ್ರರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಶ್ವೇತಭವನದಲ್ಲಿ ಜೋ ಬೈಡನ್ ಭಾವನಾತ್ಮಕ ಭಾಷಣದಲ್ಲಿ ಹೇಳಿದ್ದಾರೆ.
ಹಮೀದ್ ಕರ್ಜೈ ವಿಮಾನ ನಿಲ್ದಾಣದಲ್ಲಿ ಮಾರಣಾಂತಿಕ ಆತ್ಮಾಹುತಿ ಬಾಂಬ್ ದಾಳಿಯ ಹೊರತಾಗಿಯೂ ಅಫ್ಗಾನಿಸ್ತಾನದಿಂದ ಅಮೆರಿಕದ ನಾಗರಿಕರು ಮತ್ತು ಇತರರ ಸ್ಥಳಾಂತರ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಅವರು ಹೇಳಿದ್ದಾರೆ.
12 ಮಂದಿ ಅಮೆರಿಕದ ಯೋಧರು ಮತ್ತು 60ಕ್ಕೂ ಹೆಚ್ಚು ಅಫ್ಗಾನ್ ನಾಗರಿಕರನ್ನು ಕೊಂದ ದಾಳಿಗಳಿಗೆ ಇಸ್ಲಾಮಿಕ್ ಸ್ಟೇಟ್ ಗುಂಪಿನ ಅಫ್ಗಾನಿಸ್ತಾನದ ಅಂಗಸಂಸ್ಥೆಯೇ ಕಾರಣ ಎಂದು ಅವರು ಹೇಳಿದರು. ಅವರು ಈಗ ದೇಶವನ್ನು ನಿಯಂತ್ರಿಸುತ್ತಿರುವ ತಾಲಿಬಾನ್ ಜೊತೆ ಕೈಜೋಡಿಸಿರುವ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.