News Karnataka Kannada
Thursday, May 02 2024
ವಿದೇಶ

ಯುದ್ಧವಿಮಾನದಲ್ಲಿ ಹುಟ್ಟಿದ್ದ ಮಗುವಿಗೆ ವಿಮಾನದ ಹೆಸರು ನಾಮಕರಣ

America
Photo Credit :

ಕಾಬೂಲ್: ಯುದ್ಧಗ್ರಸ್ಥ ಅಫ್ಘಾನಿಸ್ತಾನದಿಂದ ಸ್ಥಳಾಂತರಗೊಳ್ಳುವ ವೇಳೆ ಅಮೆರಿಕ ಯುದ್ಧವಿಮಾನದಲ್ಲಿಯೇ ಹುಟ್ಟಿದ್ದ ಹೆಣ್ಣು ಮಗುವಿಗೆ ಆಫ್ಘನ್ ಪಾಲಕರು ವಿಮಾನದ ಹೆಸರನ್ನೇ ಇಟ್ಟಿರುವ ಆಚರಿಯ ಘಟನೆ ವರದಿಯಾಗಿದೆ.

ಅಮೆರಿಕದ ಯುದ್ಧವಿಮಾನ ಹಾರಾಟ ನಡೆಸುವ ವೇಳೆ ತಾಯಿಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಒಡನೆಯೇ ವಿಮಾನ ಚಾಲಕ ವಿಮಾನವನ್ನು ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದ. ಭೂಮಿಯಿಂದ ಎತ್ತರಕ್ಕೆ ಹೋದಂತೆ ಆಮ್ಲಜನಕ ಕೊರತೆ ಮತ್ತು ಒತ್ತಡದಲ್ಲಿ ಏರುಪೇರು ಉಂಟಾಗುವುದರಿಂದ ಚಾಲಕ ಈ ಕೆಲಸಕ್ಕೆ ಮುಂದಾಗಿದ್ದ. ಕಡೆಗೂ ವಿಮಾನದಲ್ಲಿಯೇ ಸುರಕ್ಷಿತವಾಗಿ ಹೆರಿಗೆಯಾಗಿತ್ತು.

ವಿಮಾನ ಲ್ಯಾಂಡ್ ಆಗುವ ವೇಳೆ ತಾಯಿ ಮಗುವನ್ನು ಸ್ವೀಕರಿಸಲು ವೈದ್ಯಕೀಯ ತಂಡ ಸಿದ್ಧವಾಗಿತ್ತು. ಆ ವಿಮಾನದ ಹೆಸರು ”ರೀಚ್ 828” ಎಂಬುದಾಗಿತ್ತು. ಸಂಖ್ಯೆಯನ್ನು ಹೊರತುಪಡಿಸಿ ಆ ಹೆಸರನ್ನೇ ಇದೀಗ ಹೆಣ್ಣು ಮಗುವಿಗೆ ಇಡಲಾಗಿದೆ. ಹೆಣ್ಣು ಮಗುವಿನ ಹೆಸರು ‘ರೀಚ್’.

ಸ್ಥಳಾಂತರ ಕಾರ್ಯಾಚರಣೆಯ ನೆನಪು ಜೀವನ ಪರ್ಯಂತ ಉಳಿಯಬೇಕು ಎನ್ನುವ ಉದ್ದೇಶದಿಂದ ವಿಮಾನದ ಹೆಸರು ನಾಮಕರಣ ಮಾಡಿದ್ದಾಗಿ ಪಾಲಕರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು