ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇನ್ಮುಂದೆ 10 ವರ್ಷ ಹಳೆಯ ಡೀಸೆಲ್ ಮತ್ತು 15 ವರ್ಷ ಹಳೆಯ ಪೆಟ್ರೋಲ್ ವಾಹನಗಳನ್ನು ರಸ್ತೆಗಿಳಿಯುವಂತಿಲ್ಲ.
ಹಳೆಯ ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳು ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ವಾಯು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಗುಜರಿ ನೀತಿಯಡಿ ಹಳೆಯ ವಾಹನಗಳನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಿದೆ.
ಈ ಹಳೆಯ ವಾಹನಗಳಿಗಾಗಿ ಗುಜರಿ ಕೇಂದ್ರಗಳು ತೆರೆಯಲಿದ್ದು, ಗುಜರಿ ಮೌಲ್ಯದ ಲೆಕ್ಕಾಚಾರದ ಆದಾರದ ಮೇಲೆ ಪ್ರೋತ್ಸಾಹಧನ ಎಂದು ನೀಡಲಾಗುತ್ತದೆ.
ಹೊಸ ವಾಹನ ಖರೀದಿಸುವಾಗ ಗುಜರಿ ಪ್ರಮಾಣಪತ್ರದ ಮೇಲೆ ಶೇ. 5ರಷ್ಟು ರಿಯಾಯಿತಿ ಸಿಗಲಿದೆ. ಗುಜರಿ ನೀತಿ ಉಲ್ಲಂಘಿಸಿ ರಸ್ತೆಗಿಳಿಯುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ದೇಶದ ಇತರೆ ಪ್ರಮುಖ ನಗರಗಳಲ್ಲಿ ಶೀಘ್ರದಲ್ಲೇ ಗುಜರಿ ನೀತಿ ಜಾರಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.