News Karnataka Kannada
Tuesday, April 30 2024
ವಿದೇಶ

ಅಮೆರಿಕ ಸೇನೆ ನಿಯಂತ್ರಣದಲ್ಲಿ ಕಾಬೂಲ್ ವಿಮಾನ ನಿಲ್ದಾಣ, 7 ಸಾವಿರಕ್ಕೂ ಹೆಚ್ಚು ಮಂದಿ ರಕ್ಷಣೆ

Lavlina Airport
Photo Credit :

ವಾಷಿಂಗ್ಟನ್, ; ತಾಲಿಬಾನಿಗಳು ಕಾಬೂಲ್ ಮೇಲೆ ದಾಳಿ ನಡೆಸಿದ ನಂತರ ಸುಮಾರು ಏಳು ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದ್ದೇವೆ ಮತ್ತು ಇನ್ನೂ ನಮ್ಮ 5200 ಯೋಧರು ಅಲ್ಲೇ ಸುರಕ್ಷತಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅಮೆರಿಕ ಸೇನೆಯ ಪೆಂಟಗನ್ ಅಧಿಕಾರಿಗಳು ತಿಳಿಸಿದ್ದಾರೆ. ಆಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.
ಈಗಾಗಲೇ ಕಾಬೂಲ್ ವಿಮಾನ ನಿಲ್ದಾಣದಿಂದ ಜನರನ್ನು ಸುರಕ್ಷಿತವಾಗಿ ತೆರಳಲು ಅನುವಾಗುವಂತೆ ಎಲ್ಲ ಸುರಕ್ಷತಾ ಕ್ರಮಗಳನ್ನು ನಮ್ಮ ಅಮೆರಿಕ ಪಡೆಗಳು ಮಿತ್ರರಾಷ್ಟ್ರಗಳ ಯೋಧರೊಂದಿಗೆ ಕೈಗೊಂಡಿದ್ದಾರೆ. ಈವರೆಗೆ ಸುಮಾರು 12 ಸಾವಿರಕ್ಕೂ ಹೆಚ್ಚು ಮಂದಿ ದೇಶ ತೊರೆದಿರುವ ಸಾಧ್ಯತೆ ಇದೆ. ಆಫ್ಘನ್ ಜನರು ಅಮೆರಿಕದ ತಾಲಿಬಾನಿಗಳನ್ನು ಹೊಡೆದೋಡಿಸಿದ ದಿನವನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಿರುವುದು ಸೇನೆಗೆ ಸಿಕ್ಕ ಗೆಲುವು ಎಂದು ಮೇಜರ್ ಜನರಲ್ ಹಾಂಕ್ ಟೈಲರ್ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು