ಕಾಬೂಲ್: ಅಮೇರಿಕಾದ ಪಡೆಗಳು 20 ವರ್ಷಗಳ ಬಳಿಕ ಅಫ್ಗಾನಿಸ್ತಾನ ತೊರೆದ ಬೆನ್ನಲ್ಲೇ ತಾಲಿಬಾನ್ ಸಂಪೂರ್ಣ ಸ್ವಾತಂತ್ರ್ಯ ಘೋಷಿಸಿಕೊಂಡಿದೆ.
‘ಅಮೆರಿಕದ ಯೋಧರು ಕಾಬೂಲ್ ವಿಮಾನ ನಿಲ್ದಾಣ ತೊರೆದಿದ್ದಾರೆ. ನಮ್ಮ ದೇಶವೀಗ ಸಂಪೂರ್ಣ ಸ್ವತಂತ್ರಗೊಂಡಿದೆ’ ಎಂದು ತಾಲಿಬಾನ್ ವಕ್ತಾರ ಜಬಿಯುಲ್ಲಾ ಮುಜಾಹಿದ್ ಹೇಳಿದ್ದಾರೆ.
ಆಗಸ್ಟ್ 30ರ ಗಡುವು ಮುಗಿಯುತ್ತಿದ್ದಂತೆಯೇ, ಅಫ್ಗಾನಿಸ್ತಾನದಿಂದ ತೆರವು ಕಾರ್ಯಾಚರಣೆ ಮುಗಿದಿದೆ ಎಂದು ಅಮೆರಿಕ ಘೋಷಿಸಿತ್ತು.
ಸೋಮವಾರ ಮಧ್ಯರಾತ್ರಿ ವೇಳೆಗೆ ಅಮೆರಿಕ ಯೋಧರನ್ನೊಳಗೊಂಡ ಕೊನೆಯ ವಿಮಾನ ಕಾಬೂಲ್ನಿಂದ ನಿರ್ಗಮಿಸಿದ ಕೂಡಲೇ ತಾಲಿಬಾನ್ ಹೋರಾಟಗಾರರು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಾಚರಣೆ ನಡೆಸಿದ್ದಾರೆ.