News Karnataka Kannada
Friday, May 03 2024
ವಿದೇಶ

ಡ್ರೋನ್ ದಾಳಿಯಲ್ಲಿ ಇಬ್ಬರು ಉನ್ನತ ಮಟ್ಟದ ಉಗ್ರರು ಸಾವು: ಅಮೇರಿಕಾ ಸೇನೆ

Afghan 19082021
Photo Credit :

ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿ ಅಮೇರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಇಬ್ಬರು ಉನ್ನತ ಮಟ್ಟದ ಉಗ್ರರನ್ನು ಹತರಾಗಿದ್ದಾರೆ ಎಂದು ಅಮೇರಿಕಾ ಸೇನೆ ತಿಳಿಸಿದೆ.

ಗುರುವಾರ ಕಾಬೂಲ್ ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹತ್ಯಾ ಬಾಂಬರ್ ದಾಳಿಯಲ್ಲಿ 13 ಅಮೇರಿಕಾದ ಸೈನಿಕರು ಮತ್ತು 169 ಮಂದಿ ಆಫ್ಘಾನ್‌ ನಾಗರಿಕರು ಮೃತಪಟ್ಟಿದ್ದರು. ಈ ಹೊಣೆಯನ್ನು ಐಸಿಸ್ ಖುರಾಸನ್ ಘಟಕ ಹೊತ್ತುಕೊಂಡಿತ್ತು.

ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಮೆರಿಕ ಅಧ್ಯಕ್ಷ ಜೋ- ಬೈಡನ್ ಹೇಳಿದ್ದರು. ಅದರಂತೆ ಇಬ್ಬರು ಉಗ್ರರನ್ನು ಡ್ರೋನ್ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ. ಒಬ್ಬರು ಗಾಯಗೊಂಡಿದ್ದಾರೆ. ಯಾವುದೇ ನಾಗರಿಕರು ಗಾಯಗೊಂಡಿಲ್ಲ ಎಂದು ಅಮೆರಿಕದ ಪ್ರಾದೇಶಿಕ ಕಾರ್ಯಾಚರಣೆಗಾಗಿ ಜಂಟಿ ಸಿಬ್ಬಂದಿಯ ಉಪ ನಿರ್ದೇಶಕ ಮೇಜರ್ ಜನರಲ್ ಹ್ಯಾಂಕ್ ಟೇಲರ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಹೆಚ್ಚುವರಿ ದಾಳಿ ಸಾಧ್ಯತೆ ಕುರಿತಂತೆ ಪ್ರತಿಕ್ರಿಯಿಸಿರುವ ಪೆಂಟಗಾನ್ ವಕ್ತಾರ ಜಾನ್ ಕಿರ್ಬಿ, ಬೆದರಿಕೆಗಳು ಇನ್ನೂ ತುಂಬಾ ನೈಜವಾಗಿವೆ, ಅವು ತುಂಬಾ ಕ್ರಿಯಾತ್ಮಕವಾಗಿವೆ ಮತ್ತು ನಾವು ಅವುಗಳನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು