ಚೀನಾ : ಆನ್ಲೈನ್ ಗೇಮ್ಸ್ಗಳಿಂದ ಮಕ್ಕಳ ಮನೋ-ಬೌದ್ಧಿಕ ಬೆಳವಣಿಗೆ ಮೇಲೆ ಆಗುವ ಪರಿಣಾಮವನ್ನು ಗಮನಿಸಿ ಚೀನಾ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ.
ಚೀನಾದಲ್ಲಿ ಮಕ್ಕಳು ವಾರಕ್ಕೆ ಮೂರು ಗಂಟೆ ಮಾತ್ರ ಆನ್ಲೈನ್ ಗೇಮ್ಸ್ ಆಡಬಹುದು. ಅದಕ್ಕಿಂತ ಹೆಚ್ಚಿನ ಸಮಯ ಗೇಮಿಂಗ್ನಲ್ಲಿ ಕಳೆಯಲು ಅವಕಾಶ ಇಲ್ಲ.
ಸೆ.1 ರಿಂದ ಈ ನಿಯಮ ಜಾರಿಗೆ ಬರಲಿದೆ. ಶುಕ್ರವಾರ, ವಾರಾಂತ್ಯಗಳು ಹಾಗೂ ಸಾರ್ವಜನಿಕ ರಜೆ ಸಂದರ್ಭ ರಾತ್ರಿ 8-9 ಗಂಟೆ ನಡುವೆ ಮಾತ್ರ ಆಟ ಆಡಲು ಅನುಮತಿ ಇದೆ.
ಚೀನಿ ಸರ್ಕಾರದ ಈ ನಡೆ ಆನ್ಲೈನ್ ಗೇಮಿಂಗ್ ಕಂಪನಿಗಳಿಗೆ ತಲೆನೋವಾಗಿದೆ. ಆನ್ಲೈನ್ ಗೇಮಿಂಗ್ ಹುಚ್ಚು ಬೆಳೆಸಿಕೊಂಡರೆ ಅದರಿಂದ ಹೊರಬರುವುದು ಕಷ್ಟ. ಇದರಿಂದ ಬೇರೆ ರೀತಿಯ ಕಲಿಕೆಗಳಲ್ಲಿ ಮಕ್ಕಳು ಹಿಂದೆಬೀಳುತ್ತಿದ್ದರು. ಇದನ್ನು ಗಮನದಲ್ಲಿಟ್ಟುಕೊಂಡು 2019 ರಲ್ಲಿ ಚೀನಾ ದಿನಕ್ಕೆ ಒಂದೂವರೆ ಗಂಟೆ ಮಾತ್ರ ಆಟ ಆಡಬೇಕು ಎಂದು ರೂಲ್ಸ್ ಮಾಡಿದ್ದು, ಇದೀಗ ವಾರದಲ್ಲಿ ಮೂರು ಗಂಟೆ ಮಾತ್ರ ಆನ್ಲೈನ್ ಗೇಮಿಂಗ್ಗೆ ಅವಕಾಶ ದೊರೆತಿದೆ.