Bengaluru 22°C
Ad

ಮಧ್ಯಾಹ್ನ ಫುಡ್‌ ಆರ್ಡರ್‌ ಕಡಿಮೆ ಮಾಡಿ ಎಂದು ಜೊಮ್ಯಾಟೊ ಪೋಸ್ಟ್

ಈಗಿನ ಜನರು ಹೆಚ್ಚಾಗಿ ಆನ್‌ಲೈನ್‌ ಮೊರೆ ಹೋಗುತ್ತಾರೆ. ಬಟ್ಟೆಯಾಗಲಿ, ಆಹಾರವಾಗಲಿ, ಉಳಿದ ಎಲ್ಲವನ್ನು ನಾವು ಇರುವ ಜಾಗಕ್ಕೆ ಒಯ್ಯುವ ವ್ಯವಸ್ಥೆ ಇದೆ. ಅದರಲ್ಲೂ ಈಗಂತು ಎಲ್ಲಾ ತಮ್ಮ ಕೆಲಸದಲ್ಲಿ ಬ್ಯೂಸಿ ಆಗಿರುತ್ತಾರೆ. ಹೀಗಾಗಿ ಶಾಪಿಂಗ್‌ ಆಗಲಿ, ಅಡಿಗೆಗಾಗಲಿ ಸಮಯ ಸಿಗುವುದು ಕಡಿಮೆ ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆನ್‌ಲೈನ್‌ ಮೂಲಕ ಆರಡರ್‌ ಮಾಡುತ್ತಾರೆ.

ಸ್ವಿಗ್ಗಿ, ಜೊಮ್ಯಾಟೊ ಸೇರಿದಂತೆ ಅನೇಕ ಮೊಬೈಲ್​ ಫುಡ್ ಆ್ಯಪ್​​ಗಳನ್ನು ಕಾಣಬಹುದು. ಆದರೆ ಇದೀಗ ಜೊಮ್ಯಾಟೊ ಸೋಶಿಯಲ್​​ ಮೀಡಿಯಾಗಳಲ್ಲಿ ಹೊಸ ಪೋಸ್ಟ್​​ ಒಂದನ್ನು ಹಂಚಿಕೊಂಡಿದ್ದು, ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಫುಡ್‌ ಆಪ್‌ ಜೊಮ್ಯಾಟೊ ಇದೀಗ ತನ್ನಅಧಿಕೃತ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದು,“ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ” ಎಂದು ಬರೆದುಕೊಂಡಿದೆ. ” ಅಗತ್ಯವಿದ್ದರೆ ಮಾತ್ರ ಮಧ್ಯಾಹ್ನದ ಸಮಯದಲ್ಲಿ ಆಹಾರವನ್ನು ಆರ್ಡರ್ ಮಾಡಿ, ಇಲ್ಲದಿದ್ದರೆ ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ” ಎಂದು ಬರೆದುಕೊಂಡಿದೆ.

ಈಗಬ ಆಗುತ್ತಿರುವ ಹವಮಾನದ ಬದಲಾವಣೆಯಿಂದಾಗಿ ಡೆಲಿವರ್‌ಬಾಯ್‌ಗಳಿಗೆ ಆರ್ಡರ್‌ ತಲುಪಿಸಲು ಕಷ್ಟವಾಗಿದ್ದು ಅವರ ಕಾಳಜಿಯಿಂದಾಗಿ ಈ ಪೋಸ್ಟ್‌ನ್ನು ಹಾಕಲಾಗಿದೆ ಆದರೂ ಕೆಲ ನೆಟ್ಟಿಗರು, ಇದಕ್ಕೆ ವಿರುದ್ಧವಾಗಿ ಉತ್ತರ ನೀಡಿದ್ದು ನಿಮ್ಮ ಕಾಳಜಿ ಅರ್ಥವಾಗುತ್ತದೆ ಆದರೆ ಊಟವನ್ನು ಮುಂದೂಡಾಗುವುದಿಲ್ಲವಲ್ಲ ಎಂದಿದ್ದಾರೆ.

Ad
Ad
Nk Channel Final 21 09 2023
Ad