Bengaluru 22°C
Ad

93ರ ವಯಸ್ಸಿನಲ್ಲಿ 5ನೇ ಮದುವೆಯಾದ ಮಾಧ್ಯಮ ಲೋಕದ ದೊರೆ

ಮಾಧ್ಯಮ ಲೋಕದ ದೊರೆ ಎಂದೇ ಕರೆಸಿಕೊಳ್ಳುವ ದಿಗ್ಗಜ ರೂಪರ್ಟ್ ಮುರ್ಡೋಕ್ ಅವರು 5ನೇ ಬಾರಿಗೆ ವಿವಾಹವಾಗಿದ್ದಾರೆ. 93 ವರ್ಷದ ರೂಪರ್ಟ್ ಮುರ್ಡೋಕ್ ಅವರು 67 ವರ್ಷದ ಎಲೆನಾ ಝುಕೋವಾ ಅವರನ್ನ ವರಿಸಿದ್ದಾರೆ ಎಂದು ಹೇಳಲಾಗಿದೆ.

ಮಾಧ್ಯಮ ಲೋಕದ ದೊರೆ ಎಂದೇ ಕರೆಸಿಕೊಳ್ಳುವ ದಿಗ್ಗಜ ರೂಪರ್ಟ್ ಮುರ್ಡೋಕ್ ಅವರು 5ನೇ ಬಾರಿಗೆ ವಿವಾಹವಾಗಿದ್ದಾರೆ. 93 ವರ್ಷದ ರೂಪರ್ಟ್ ಮುರ್ಡೋಕ್ ಅವರು 67 ವರ್ಷದ ಎಲೆನಾ ಝುಕೋವಾ ಅವರನ್ನ ವರಿಸಿದ್ದಾರೆ ಎಂದು ಹೇಳಲಾಗಿದೆ.

ಅಮೆರಿಕದ ಲಾಸ್​ ಏಂಜಲೀಸ್​ನ ಬೆಲ್​ಏರ್​ನ ವೈನ್‌ಯಾರ್ಡ್​​​ನಲ್ಲಿ ನಡೆದ ಸುಂದರ ವಿವಾಹ ಸಮಾರಂಭದಲ್ಲಿ ರೂಪರ್ಟ್ ಮುರ್ಡೋಕ್ ಅವರು ಎಲೆನಾ ಝುಕೋವಾ ಅವರ ಕೈ ಹಿಡಿದಿದ್ದಾರೆ. ಕಳೆದ ವರ್ಷ ಫಾಕ್ಸ್ ಮತ್ತು ನ್ಯೂಸ್ ಕಾರ್ಪೊರೇಶನ್‌ನ ಮಂಡಳಿಗಳಿಂದ ನಿವೃತ್ತಿ ಪಡೆದ ಮುರ್ಡೋಕ್ ಅವರು ಎಲೆನಾ ಝುಕೋವಾ ಅವರೊಂದಿಗೆ 5ನೇ ಮದುವೆ ಆಗಿದ್ದಾರೆ. 3-4 ತಿಂಗಳ ಹಿಂದೆ ಈ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.

ವಿಶ್ವದ್ಯಾಂತ ಅತ್ಯಂತ ಜನಪ್ರಿಯ ಮಾಧ್ಯಮಗಳ ಮಾಲೀಕ ರೂಪರ್ಟ್ ಮುರ್ಡೋಕ್ ಆಗಿದ್ದಾರೆ. ದಿ ಸನ್, ದಿ ಟೈಮ್ಸ್, ನ್ಯೂಯಾರ್ಕ್ ಪೋಸ್ಟ್, ದಿ ವಿಲ್ ಸ್ಟ್ರೀಟ್ ಜರ್ನಲ್, ಹೆರಾಲ್ಡ್ ಸನ್ ಮತ್ತು ದಿ ಡೈಲಿ ಟೆಲಿಗ್ರಾಫ್ ಇತರೆ ಮಾಧ್ಯಮಗಳ ಮಾಲೀಕರಾಗಿದ್ದರು. ಈ ಎಲ್ಲ ಕಂಪನಿಗಳಿಗೆ ಪೋಷಕ ಕಂಪನಿಗಳನ್ನ ಹುಟ್ಟು ಹಾಕಿದ್ದೇ ಇದೇ ಮುರ್ಡೋಕ್ ಆಗಿದ್ದಾರೆ. ಇವರು 2022ರ ಪೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು.

Ad
Ad
Nk Channel Final 21 09 2023
Ad