Bengaluru 21°C
Ad

ಅಶ್ಲೀಲ ವಿಡಿಯೋ ಹಂಚಿಕೆ ಕೇಸ್‌ : ಸಚಿವ ಜಮೀರ್ ಶಿಷ್ಯ ಸೇರಿ ಇಬ್ಬರನ್ನು ಬಂಧಿಸಿದ ಎಸ್‌ಐಟಿ

ಜೆಡಿಎಸ್​ ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ವಾಟ್ಸಪ್​ಗಳ ಮೂಲಕ ಹರಿಬಿಟ್ಟ ಆರೋಪದ ಮೇಲೆ ಜೆಡಿಎಸ್​ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಬರೋಬ್ಬರಿ ಒಂದು ತಿಂಗಳು ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು: ಜೆಡಿಎಸ್​ ಸಂಸದ ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳನ್ನು ವಾಟ್ಸಪ್​ಗಳ ಮೂಲಕ ಹರಿಬಿಟ್ಟ ಆರೋಪದ ಮೇಲೆ ಜೆಡಿಎಸ್​ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಬರೋಬ್ಬರಿ ಒಂದು ತಿಂಗಳು ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ.

ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಶ್ಲೀಲ ವಿಡಿಯೋ ಹರಿಬಿಟ್ಟವರನ್ನು ಕೊನೆಗೂ ಎಸ್​ಐಟಿ ಬಂಧಿಸಿದೆ. ಇಂದು(ಮೇ 28) ಹೈಕೋರ್ಟ್​​ಗೆ ಬಂದಿದ್ದ ಆರೋಪಿಗಳಾದ ನವೀನ್ ಗೌಡ, ಚೇತನ್​ನನ್ನು ಎಸ್​ಐಟಿ ಬಂಧಿಸಿದೆ.

ವಿಡಿಯೋ ವೈರಲ್​ ಮಾಡಿದ್ದವರನ್ನು ಬಂಧಿಸದಕ್ಕೆ ಎಚ್​ಡಿ ಕುಮಾರಸ್ವಾಮಿ ಅವರು ಸಾಕಷ್ಟು ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ದೂರು ದಾಖಲಾದ ಬರೋಬ್ಬರಿ ಒಂದು ತಿಂಗಳು ಬಳಿಕ ಆರೋಪಿಗಳ ಬಂಧನವಾಗಿದೆ.

Ad
Ad
Nk Channel Final 21 09 2023
Ad