Bengaluru 23°C
Ad

ದರ್ಶನ್ ಖೈದಿ ನಂಬರ್ ನಲ್ಲಿಯೇ ಬಂತು ಮೊಬೈಲ್ ಕವರ್; ಫುಲ್‌ ಟ್ರೆಂಡಿಂಗ್

Darshan (1)

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಒಂದು ಕಡೆಯಿಂದ ತಾಳ್ಮೆಯಿಂದ ಇರಿ ಎಂದು ವಿಜಯಲಕ್ಷ್ಮಿ ಫ್ಯಾನ್ಸ್ ಮನವಿ ಮಾಡಿದ್ರೆ, ಮತ್ತೊಂದೆಡೆ ದರ್ಶನ್ ಖೈದಿ ನಂಬರ್ ಇಟ್ಕೊಂಡು ಕೈ ಮೇಲೆ, ಮೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ಅದಷ್ಟೇ ಅಲ್ಲ, ವಾಹನಗಳ ಮೇಲೂ ಇದೇ ನಂಬರ್. ನಟನ ಮೇಲಿನ ಕ್ರೇಜ್‌ನಿಂದ ಖೈದಿ ನಂಬರ್ 6106 ಮತ್ತೆ ಟ್ರೆಂಡಿಂಗ್‌ನಲ್ಲಿದೆ. ‌

ದರ್ಶನ್ ಏಲ್ಲೇ ಇರಲಿ, ಹೇಗೆ ಇರಲಿ ಅವರನ್ನು ಬಿಟ್ಟು ಕೊಡುವ ಮಾತೇ ಇಲ್ಲ ಅಂತ ಫ್ಯಾನ್ಸ್ ಮತ್ತೆ ಪ್ರೂವ್ ಮಾಡಿದ್ದಾರೆ. ನಟನ ಮೇಲಿನ ಹುಚ್ಚು ಅಭಿಮಾನಕ್ಕೆ ಕೈ ಮತ್ತು ಮೈ ಮೇಲೆ ಟ್ಯಾಟೂ ಮಾತ್ರವಲ್ಲ ಕಾರು, ಬೈಕಿನ ಮೇಲಿಯೂ ಕೂಡ ದರ್ಶನ್‌ಗೆ ನೀಡಿರುವ ಖೈದಿ ನಂಬರ್ 6106 ಅನ್ನು ವಾಹನದ ನಂಬರ್ ಪ್ಲೇಟ್‌ಗಳಾಗಿ ಹಾಕಿಸಿಕೊಳ್ತಿದ್ದಾರೆ.

ನಿಯಮದ ಪ್ರಕಾರ, ನಂಬರ್ ಪ್ಲೇಟ್‌ ಅನ್ನು ವಿರೂಪಗೊಳಿಸುವ ಹಾಗಿಲ್ಲ. ಒಂದು ವೇಳೆ, ಹುಚ್ಚು ಅಭಿಮಾನ ಮೆರೆದರೆ ಕೇಸ್ ಆಗುತ್ತದೆ ಎಂದು ಆರ್‌ಟಿಓ ಅಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ದರ್ಶನ್ ಖೈದಿ ನಂಬರ್‌ನಲ್ಲಿಯೇ ಬಂತು ಮೊಬೈಲ್ ಬ್ಯಾಕ್ ಕವರ್ ಮಾಡಿಕೊಂಡಿದ್ದಾರೆ ಫ್ಯಾನ್ಸ್. ಇದೀಗ ಈಗ ಖೈದಿ ನಂಬರ್ 6106 ಸ್ಟಿಕ್ಕರ್‌ಗಳಿಗೆ ಫುಲ್ ಡಿಮ್ಯಾಂಡ್ ಹೆಚ್ಚಾಗಿದೆ. ಮೊಬೈಲ್ ಅಂಗಡಿಗಳಲ್ಲಿ ಇದೇ ಬ್ಯಾಕ್ ಕವರ್ ನ್ನು ಕೇಳಿ ಪಡೆಯುತ್ತಿರುವ ದರ್ಶನ್ ಫ್ಯಾನ್ಸ್. ಒಟ್ನಲ್ಲಿ ಎಲ್ಲಾ ಕಡೆಯಿಂದಲೂ ಖೈದಿ ನಂಬರ್ 6106 ಅನ್ನು ಟ್ರೆಂಡಿಂಗ್‌ಗೆ ಬರುವಂತೆ ಫ್ಯಾನ್ಸ್ ಮಾಡಿದ್ದಾರೆ.

Ad
Ad
Nk Channel Final 21 09 2023
Ad