Showing 20 of 674 posts • Page 12 of 34
ಶಕ್ತಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ರಿಜ್ವಿತ್ ಜಗದೀಶ್ ಇವರು ಬಿಹಾರ ರಾಜ್ಯದ ಸಿವಾನ್ನಲ್ಲಿ ಅಕ್ಟೋಬರ್ 1ರಿಂದ 4ರವರೆಗೆ ನಡೆದ ವಿದ್ಯಾಭಾರತಿ ರಾಷ್ಟ್ರ ಮಟ್ಟದ ಟೆಕ್ವಾಂಡೊ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆಯುವುದರ ಮೂಲಕ ಎಸ್.ಜಿ.ಎಫ್.ಐ ರಾಷ್ಟ್ರೀಯ ಮಟ್ಟದ ಟೆಕ್ವಾಂಡೊ ಚಾಂಪಿಯನ್ಶಿಪ್ಗೆ ಅಯ್ಕೆಯಾಗಿರುತ್ತಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ವೇಳೆ ಭಾರತ ಮತ್ತು ನ್ಯೂಜಿಲೆಂಡ್ ಧ್ವಜಗಳ ಜೊತೆಗೆ ಕರ್ನಾಟಕ ರಾಜ್ಯ ಧ್ವಜವನ್ನು ಪ್ರಮುಖವಾಗಿ ಪ್ರದರ್ಶಿಸಲಾಯಿತು.
ಪ್ರತಿ ಪಂದ್ಯವು ರೋಮಾಂಚಕ ವಿಜಯಗಳು ಅಥವಾ ಅನಿರೀಕ್ಷಿತ ಅಸಮಾಧಾನಗಳಿಗೆ ಕಾರಣವಾಗುವ ಕ್ರೀಡಾ ಅಂದಾಜಿಸುವಿಕೆಯ ಆಹ್ಲಾದಕರ ಜಗತ್ತಿನಲ್ಲಿ, ಫೋಮೊ7 ಕ್ರಿಕೆಟ್, ಟೆನ್ನಿಸ್ ಮತ್ತು ವಾಲಿಬಾಲ್ನಲ್ಲಿ ತಮ್ಮ ಕೌಶಲ್ಯಗಳನ್ನು ಪರೀಕ್ಷಿಸಲು ಉತ್ಸುಕರಾಗಿರುವ ಉತ್ಸಾಹಿಗಳಿಗೆ ಒಂದು ಪ್ರಮುಖ ವೇದಿಕೆಯಾಗಿ ನಿಂತಿದೆ.
ಐಪಿಎಲ್-2025 ಸೀಸನ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಅವರನ್ನು ನೇಮಿಸಲಾಗಿದೆ.
ಮೊದಲ ಬಾರಿಗೆ ಕ್ರಿಕೆಟಿಗ ಶಿವಂ ದುಬೆ ಮಂಗಳೂರಿಗೆ ಭೇಟಿ ನೀಡಿದ್ದಾರೆ. ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ ದುಬೆ ತಾಯಿಯ ದರ್ಶನ ಪಡೆದಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶದ ನಡುವೆ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ದಾಖಲೆಗಳ ಸುರಿಮಳೆಗೈದಿದೆ.
ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರನ್ನು ಗುಜರಾತ್ನ ಕಚ್ ಕೊಲ್ಲಿಯ ದಕ್ಷಿಣ ತೀರದಲ್ಲಿರುವ ಐತಿಹಾಸಿಕ ಹಲಾರ್ ಪ್ರದೇಶದ ಭಾರತೀಯ ರಾಜಪ್ರಭುತ್ವದ ರಾಜ್ಯವಾದ ಜಾಮ್ನಗರ್ ಎಂದು ಕರೆಯಲ್ಪಡುವ
ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರು ತೆಲಂಗಾಣದ ಪೊಲೀಸ್ ಮಹಾನಿರ್ದೇಶಕರಿಗೆ ಶುಕ್ರವಾರ ವರದಿ ಮಾಡಿದ ನಂತರ ಅಧಿಕೃತವಾಗಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರವನ್ನು ಸ್ವೀಕರಿಸಿದರು.
ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರಾದ ರಾಫೆಲ್ ನಡಾಲ್ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ. ಭಾವನಾತ್ಮಕ ವಿಡಿಯೋದಲ್ಲಿ 22 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಆಟಕ್ಕೆ ವಿದಾಯ ಹೇಳಿದರು.
ಆಲ್ರೌಂಡ್ ಆಟದ ಪ್ರದರ್ಶನ ನೀಡಿದ ಭಾರತೀಯ ವನಿತೆಯರು ಬುಧವಾರ ನಡೆದ ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಕೂಟದ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 82 ರನ್ನುಗಳಿಂದ ಸೋಲಿಸಿ ಸಂಭ್ರಮಿಸಿದೆ.
ಇಂದು ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ 2ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ, ಬಾಂಗ್ಲಾದೇಶ ತಂಡಗಳು ಮುಖಾಮುಖಿ ಆಗಿವೆ.
17 ವರ್ಷಗಳಿಂದ ಕಪ್ ಗೆಲ್ಲದ ಕೊರಗು ಆರ್ಸಿಬಿ ಫ್ಯಾನ್ಸ್ಗೆ ಇದೆ. ಈ ಕೊರಗಿಗೆ ಬ್ರೇಕ್ ಹಾಕುವ ಲೆಕ್ಕಚಾರದಲ್ಲಿರುವ ಫ್ರಾಂಚೈಸಿ, ಹೊಸ ತಂಡವನ್ನ ಕಟ್ಟೋ ಪ್ಲಾನ್ ಮಾಡಿಕೊಂಡಿದೆ. ಕೇವಲ ಆಟಗಾರರು ಮಾತ್ರವಲ್ಲ, ವಿನ್ನಿಂಗ್ ಕ್ಯಾಪ್ಟನ್ಗೆ ಪಟ್ಟ ಕಟ್ಟುವ ಲೆಕ್ಕಾಚಾರದಲ್ಲಿದೆ. ಸೀಸನ್-17ರ ಐಪಿಎಲ್ನಲ್ಲಿ ಇದು ಆರ್ಸಿಬಿಯ ಹೊಸ ಅಧ್ಯಾಯ ಎಂಬ ಘೋಷವಾಕ್ಯದಲ್ಲೇ ರೆಡ್ ಆರ್ಮಿ ಸೀಸನ್ ಶುರು ಮಾಡಿತ್ತು. ಎಲ್ಲವೂ ಉಲ್ಟಾ ಆಗಿತ್ತು. ಸತತ ಸೋಲುಗಳಿಂದ ಕೆಂಗಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈಗ ಸೀಸನ್-18ಕ್ಕೆ ತಯಾರಿ ನಡೆಸ್ತಿದೆ. ಹೊಸ ಸೀಸನ್ಗೆ […]
ಭಾರತ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಯ ನಂತರ ಬಾಂಗ್ಲಾದೇಶದ ಅನುಭವಿ ಆಟಗಾರ ಮಹಮದುಲ್ಲಾ ಟಿ 20 ಅಂತರರಾಷ್ಟ್ರೀಯ (ಟಿ 20) ಅಂತರರಾಷ್ಟ್ರೀಯ (ಟಿ 20) ಯಿಂದ
ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಮಹಿಳಾ ತಂಡವು ಪಾಕಿಸ್ತಾನ ಮಹಿಳಾ ತಂಡದ ವಿರುದ್ಧ 6 ವಿಕೆಟ್ಗಳ ಅಮೋ ಗೆಲುವು ಸಾಧಿಸಿದೆ.
ಇಂದಿನಿಂದ ಟೀಮ್ ಇಂಡಿಯಾ, ಬಾಂಗ್ಲಾದೇಶದ ನಡುವಿನ 5 ಪಂದ್ಯಗಳ ಟಿ20 ಸರಣಿ ಶುರುವಾಗಲಿದೆ. ಗ್ವಾಲಿಯರ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ ಮೊದಲ ಟಿ20 ಪಂದ್ಯ ನಡೆಯಲಿದೆ.
ಬಾಂಗ್ಲಾ ದೇಶದ ವಿರುದ್ಧದ ಮೂರು ಟಿ-20 ಪಂದ್ಯಗಳ ಸರಣಿಯು ನಾಳೆಯಿಂದ ಆರಂಭವಾಗಲಿದೆ. ಟೆಸ್ಟ್ ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿರುವ ಭಾರತ ತಂಡವು, ಟಿ-20 ಪಂದ್ಯಗಳನ್ನೂ ಗೆದ್ದು ಬೀಗಲು ಹುಮ್ಮಸ್ಸಿನಲ್ಲಿದೆ.
ಮಹಿಳಾ ಟಿ-20 ವಿಶ್ವಕಪ್ನಲ್ಲಿ ಭಾರತಕ್ಕೆ ಹೀನಾಯ ಸೋಲಾಗಿದೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನ್ಯೂಜಿಲೆಂಡ್ ತಂಡವನ್ನು ಹರ್ಮನ್ ಪ್ರೀತ್ ಕೌರ್ ಪಡೆ ಎದುರಿಸಿತ್ತು.
ಮೊದಲ ಸುತ್ತಿನಿಂದಲೇ ಪಾರಮ್ಯ ಮೆರೆದ ಅಗ್ರಶ್ರೇಯಾಂಕಿತ ಆಟಗಾರ ಮಂಗಳೂರಿನ ವಿಯಾನಿ ಆ್ಯಂಟೊನಿಯೊ ಡಿಕುನ್ಹಾ ಗುರುವಾರ ಮುಕ್ತಾಯಗೊಂಡ ಅಖಿಲ ಭಾರತ ಫಿಡೆ ರೇಟೆಡ್ ರ್ಯಾಪಿಡ್ ಮುಕ್ತ ಚೆಸ್ ಟೂರ್ನಿಯ ಪ್ರಶಸ್ತಿ ಗೆದ್ದುಕೊಂಡರು. ಬ್ಲಿಜ್ ಟೂರ್ನಿಯ ಪ್ರಶಸ್ತಿಯೂ ಅವರ ಪಾಲಾಯಿತು.
ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ ಟ್ರೋಫಿಗೆ ಇನ್ನೇನು ಮೂರು ತಿಂಗಳು ಬಾಕಿ ಇದೆ. ಮುಂದಿನ ವರ್ಷ ಫೆಬ್ರವರಿ 19ನೇ ತಾರೀಕಿನಿಂದ ಮಾರ್ಚ್ 9 ರವರೆಗೂ ನಡೆಯಲಿರೋ ಮಹತ್ವದ ಚಾಂಪಿಯನ್ ಟ್ರೋಫಿಯನ್ನು ಪಾಕಿಸ್ತಾನ ಆಯೋಜಿಸಲಿದೆ.
ಭಾರತದ ಖುಷಿ ಅವರು ಪೆರು ರಾಜಧಾನಿ ಲಿಮಾದಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಜೂನಿಯರ್ ವಿಶ್ವ ಚಾಂಪಿಯನ್ಷಿಪ್ನಲ್ಲಿ ಮಹಿಳೆಯರ 50 ಮೀಟರ್ ರೈಫಲ್ 3 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದರು.