17 ವರ್ಷಗಳಿಂದ ಕಪ್ ಗೆಲ್ಲದ ಕೊರಗು ಆರ್ಸಿಬಿ ಫ್ಯಾನ್ಸ್ಗೆ ಇದೆ. ಈ ಕೊರಗಿಗೆ ಬ್ರೇಕ್ ಹಾಕುವ ಲೆಕ್ಕಚಾರದಲ್ಲಿರುವ ಫ್ರಾಂಚೈಸಿ, ಹೊಸ ತಂಡವನ್ನ ಕಟ್ಟೋ ಪ್ಲಾನ್ ಮಾಡಿಕೊಂಡಿದೆ. ಕೇವಲ ಆಟಗಾರರು ಮಾತ್ರವಲ್ಲ, ವಿನ್ನಿಂಗ್ ಕ್ಯಾಪ್ಟನ್ಗೆ ಪಟ್ಟ ಕಟ್ಟುವ ಲೆಕ್ಕಾಚಾರದಲ್ಲಿದೆ.
ಸೀಸನ್-17ರ ಐಪಿಎಲ್ನಲ್ಲಿ ಇದು ಆರ್ಸಿಬಿಯ ಹೊಸ ಅಧ್ಯಾಯ ಎಂಬ ಘೋಷವಾಕ್ಯದಲ್ಲೇ ರೆಡ್ ಆರ್ಮಿ ಸೀಸನ್ ಶುರು ಮಾಡಿತ್ತು. ಎಲ್ಲವೂ ಉಲ್ಟಾ ಆಗಿತ್ತು. ಸತತ ಸೋಲುಗಳಿಂದ ಕೆಂಗಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಈಗ ಸೀಸನ್-18ಕ್ಕೆ ತಯಾರಿ ನಡೆಸ್ತಿದೆ. ಹೊಸ ಸೀಸನ್ಗೆ ತಯಾರಿ ನಡೆಸ್ತಿರುವ ರೆಡ್ ಆರ್ಮಿ, ಹೊಸ ಅಧ್ಯಾಯಕ್ಕೂ ನಾಂದಿ ಹಾಡುವ ಲೆಕ್ಕಾಚಾರದಲ್ಲಿದೆ. ಇದಕ್ಕಾಗೇ ಹೊಸ ಕಾಪ್ಟನ್ ಮೇಲೆ ಕಣ್ಣಿಟ್ಟಿದೆ.
ಫಾಫ್ ಡುಪ್ಲೆಸಿಗೆ ಕೊಕ್ ನೀಡುವ ನಿರ್ಧಾರ ಮಾಡಿರುವ ಫ್ರಾಂಚೈಸಿ, ಈಗ ಹೊಸ ವಿನ್ನಿಂಗ್ ಕ್ಯಾಪ್ಟನ್ ಹುಡುಕಾಟದಲ್ಲಿದೆ. ಇದಕ್ಕಾಗಿ ಈಗಾಗಲೇ ಲಿಸ್ಟ್ ಕೂಡ ಮಾಡಿರುವ ರೆಡ್ ಆರ್ಮಿ, ನಾಯಕತ್ವಕ್ಕೆ ಸೂಕ್ತ ಐದು ಅಭ್ಯರ್ಥಿಗಳಿಗೆ ಗಾಳ ಹಾಕುವ ಮೆಗಾ ಪ್ಲಾನ್ನಲ್ಲಿ ಮಾಡಿದೆ.
ಐಪಿಎಲ್ ಮೋಸ್ಟ್ ಪಾಪ್ಯುಲರ್ ಟೀಂ ಆರ್ಸಿಬಿ 2025ರ ಟೂರ್ನಿಗೆ ಒಂದಷ್ಟು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಡುಪ್ಲೆಸಿ ಬದಲು ಕನ್ನಡಿಗ ಕೆ.ಎಲ್.ರಾಹುಲ್ಗೆ ಮಣೆ ಹಾಕೋ ಪ್ಲಾನ್ ತಂಡದಲ್ಲಿ ನಡೆದಿದೆ. ಫ್ಯಾನ್ಸ್ ಒತ್ತಾಯವೂ ಇದೇ ಆಗಿದೆ. ಮೂಲಗಳ ಪ್ರಕಾರ ಮೆಗಾ ಹರಾಜಿನಲ್ಲಿ ರಾಹುಲ್ನ ಬಿಡ್ ಮಾಡಲು 25 ಕೋಟಿ ಪಕ್ಕಕ್ಕಿಟ್ಟಿದೆ ಎನ್ನಲಾಗಿದೆ.

