ಮುಂಬೈ : ಐಪಿಎಲ್-2025 ಸೀಸನ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮಹೇಲಾ ಜಯವರ್ಧನೆ ಅವರನ್ನು ನೇಮಿಸಲಾಗಿದೆ.
ಮುಂಬೈ ಇಂಡಿಯನ್ಸ್ ತಂಡವು 5 ಬಾರಿ ಚಾಂಪಿಯನ್ ಆಗಿದೆ. ಮಾರ್ಕ್ ಬೌಚರ್ ಬದಲಿಗೆ ಮಹೇಲಾ ಜಯವರ್ಧನೆ ಅವರು ನೂತನ ಮುಖ್ಯ ಕೋಚ್ ಎಂದು MI ಘೋಷಿಸಿದೆ. 2023 ಮತ್ತು 2024ರಲ್ಲಿ ಕಳೆದ 2 ಐಪಿಎಲ್ ಸೀಸನ್ಗಳಲ್ಲಿ ಮಾರ್ಕ್ ಬೌಚರ್ ಕೋಚ್ ಆಗಿದ್ದರು. ಅವರ ಸ್ಥಾನವನ್ನು ಇದೀಗ ಜಯವರ್ಧನೆ ಅಲಂಕರಿಸಿದ್ದಾರೆ.

