ಪುಣೆ: ಪುಣೆಯಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ ಆಡುತ್ತಿದೆ. ಟಾಸ್ ಗೆದ್ದುಕೊಂಡಿರುವ ಬಾಂಗ್ಲಾ ಬ್ಯಾಟಿಂಗ್ ಆಯ್ದುಕೊಂಡು ಟೀಮ್ ಇಂಡಿಯಾವನ್ನು ಬೌಲಿಂಗ್ಗೆ ಆಹ್ವಾನಿಸಿದೆ. ಪಂದ್ಯದ ವೇಳೆ ಭಾರತದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯವರು 6 ವರ್ಷದ ನಂತರ ಬೌಲಿಂಗ್ ಮಾಡಿದ್ದಾರೆ.
ಹೌದು. . .ಇದಕ್ಕೆ ಕಾರಣವಾಗಿದ್ದು ಹಾರ್ದಿಕ್ ಪಾಂಡ್ಯ. ಬಾಂಗ್ಲಾದೇಶ ಇನ್ನಿಂಗ್ಸ್ನ 9ನೇ ಓವರ್ ಬೌಲ್ ಮಾಡಲು ಹಾರ್ದಿಕ್ ಪಾಂಡ್ಯ ಬಂದರು. ಓವರ್ನ 3ನೇ ಎಸೆತವನ್ನು ಎದುರಿಸಿದ ಲಿಟನ್ ದಾಸ್ ಸ್ಟ್ರೇಟ್ ಹಿಟ್ ಮಾಡಿದರು. ಇದೇ ವೇಳೆ ಪಾಂಡ್ಯ ತಮ್ಮ ಬಲಗಾಲಿನಿಂದ ಚೆಂಡನ್ನು ತಡೆಯಲು ಯತ್ನಿಸಿದರು. ಆದರೆ, ಆ ಪ್ರಕ್ರಿಯೆಯಲ್ಲಿ ಜಾರಿಬಿದ್ದು, ನೋವಿನಿಂದ ನರಳಲಾರಂಭಿಸಿದರು. ಕೂಡಲೇ ಮೈದಾನಕ್ಕೆ ಆಗಮಿಸಿದ ತಂಡದ ಪಿಸಿಯೋ, ಪಾಂಡ್ಯಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಮತ್ತೆ ಬೌಲ್ ಮಾಡಲು ಪ್ರಯತ್ನಿಸಿದರೂ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರನ್ನು ಪಿಸಿಯೋ ಮೈದಾನದಿಂದ ಹೊರಕೆ ಕರೆದೊಯ್ದರು. ಹೀಗಾಗಿ ಪಾಂಡ್ಯಗೆ ತಮ್ಮ ಓವರ್ ಅನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆ ಓವರ್ ಅನ್ನು ವಿರಾಟ್ ಕೊಹ್ಲಿ ಪೂರ್ಣಗೊಳಿಸಿದರು. ಈ ಮೂಲಕ ವಿರಾಟ್ ಕೊಹ್ಲಿಯವರು 6 ವರ್ಷದ ನಂತರ ಬೌಲಿಂಗ್ ಮಾಡಿದು ಫ್ಯಾನ್ಸ್ಗೆ ಸರ್ಪ್ರೈಸ್ ಕೊಟ್ಟಂತಾಗಿದೆ.
https://twitter.com/i/status/1714937225144934539