News Karnataka Kannada
Saturday, May 11 2024
ಕ್ರೀಡೆ

ಏಕದಿನ ವಿಶ್ವಕಪ್ ನಲ್ಲಿ ದಾಖಲೆ ಬರೆದ ಕೊಹ್ಲಿ-ರಾಹುಲ್ ಜೊತೆಯಾಟ

Viraat
Photo Credit : News Kannada

ಚೆನ್ನೈ:  ಆಸ್ಟ್ರೇಲಿಯಾ ವಿರುದ್ದದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ 85 ರನ್ ಸಿಡಿಸಿ ಔಟಾಗಿದ್ದಾರೆ. ಕೆಎಲ್ ರಾಹುಲ್ ಜೊತೆ ಅತ್ಯುತ್ತಮ ಜೊತೆಯಾಟ ನೀಡಿದ ಕೊಹ್ಲಿ ದಾಖಲೆ ನಿರ್ಮಿಸಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 4ನೇ ಹಾಗೂ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಮೂಡಿ ಬಂದ ಟೀಂ ಇಂಡಿಯಾದ 2ನೇ ಅತ್ಯುತ್ತಮ ಜೊತೆಯಾಟ ಅನ್ನೋ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ. ಕೊಹ್ಲಿ ಹಾಗೂ ರಾಹುಲ್ 165 ರನ್ ಜೊತೆಯಾಟ ನೀಡಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು 11 ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ. ಅಲ್ಲದೆ ಕೇವಲ 262 ಇನಿಂಗ್ಸ್​ಗಳ ಮೂಲಕ ವಿರಾಟ್ ಕೊಹ್ಲಿ 113 ಬಾರಿ ಅರ್ಧಶತಕಕ್ಕಿಂತ ಹೆಚ್ಚಿನ ಸ್ಕೋರ್​ ಗಳಿಸಿದ್ದಾರೆ. ಏಕದಿನ ವಿಶ್ವಕಪ್​ನಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ 2278 ರನ್ ಕಲೆಹಾಕಿರುವ ಸಚಿನ್ ಅಗ್ರಸ್ಥಾನದಲ್ಲಿದ್ದರೆ, 1050+ ಸ್ಕೋರ್​ಗಳಿಸಿರುವ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಇದರ ಜೊತೆಗೆ ಐಸಿಸಿ ವೈಟ್​ ಬಾಲ್​ ಟೂರ್ನಿಗಳಲ್ಲಿ ಭಾರತದ ಪರ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ದಾಖಲೆ ಇದೀಗ ಕೊಹ್ಲಿ ಹೆಸರಿಗೆ ಸೇರ್ಪಡೆಯಾಗಿದೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು