ಪಾಟ್ನಾ: ಸಿಸೇರಿಯನ್ ಹೆರಿಗೆ ನಂತರ ವೈದ್ಯರು ಮಹಿಳೆಯೊಬ್ಬರ ಹೊಟ್ಟೆಯಲ್ಲಿ ಸರ್ಜಿಕಲ್ ಸ್ಪಾಂಜ್ ಅನ್ನು ಬಿಟ್ಟಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.
ಜುಲೈನಲ್ಲಿ ಸದರ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಸುಲೇಖಾ ದೇವಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಿಸೇರಿಯನ್ ಹೆರಿಗೆಯಲ್ಲಿ ಅವರು ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ವೈದ್ಯರು ಯಡವಟ್ಟೊಂದನ್ನು ಮಾಡಿದ್ದು, ಆಕೆಯ ಹೊಟ್ಟೆಯಲ್ಲಿ ಶಸ್ತ್ರಚಿಕಿತ್ಸಾ ಸ್ಪಂಜಿನ ತುಂಡನ್ನು ಹಾಗೆಯೇ ಬಿಟ್ಟಿದ್ದರು.
ಹೆರಿಗೆ ಬಳಿಕ ಸುಲೇಖಾ ಅವರಿಗೆ ತೀವ್ರ ಹೊಟ್ಟೆನೋವಿನ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸಿತು. ಹಲವಾರು ಔಷಧಗಳನ್ನು ನೀಡಿದ ಹೊರತಾಗಿಯೂ ಆಕೆ ಗುಣಮುಖರಾಗುವ ಯಾವುದೇ ಲಕ್ಷಣ ಕಂಡುಬಂದಿರಲಿಲ್ಲ. ಬಳಿಕ ಖಾಸಗಿ ಆಸ್ಪತ್ರೆಯ ವೈದ್ಯರು ಅಲ್ಟ್ರಾಸೌಂಡ್ ಮತ್ತು ಸಿಟಿ ಸ್ಕ್ಯಾನ್ ಮಾಡವಂತೆ ಸೂಚಿಸಿದ್ದು ಈ ವೇಳೆ ಸ್ಪಾಂಜ್ ಪತ್ತೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.