News Karnataka Kannada
Friday, May 10 2024
ಕ್ರೀಡೆ

ಪಾಕ್ ವಿರುದ್ಧದ ವಿಶ್ವಕಪ್‌ ಪಂದ್ಯದ ವೇಳೆ ವಿರಾಟ್‌ ಕೊಹ್ಲಿ ಎಡವಟ್ಟು

Virat Dress
Photo Credit : Twitter

ಅಹಮಾದಾಬಾದ್‌: ಪಾಕಿಸ್ತಾನ ವಿರುದ್ಧ ವಿಶ್ವಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಎಡವಟ್‌ ಮಾಡಿಕೊಂಡಿದ್ದಾರೆ.

ಪಂದ್ಯವಾಡಲು ಮೈದಾನಕ್ಕೆ ಬಂದಾಗ ಬಿಳಿ ಬಣ್ಣದ ಪಟ್ಟಿ ಇರುವ ಜೆರ್ಸಿ ಧರಿಸಿ ಇಳಿದಿದ್ದರು. ನಂತರ ಈ ವಿಚಾರ ತಿಳಿದು ಜೆರ್ಸಿ ಬದಲಾವಣೆ ಮಾಡಿ ಅಂಗಳಕ್ಕೆ ಇಳಿದಿದ್ದರು. ಟೀಂ ಇಂಡಿಯಾದ ಜೆರ್ಸಿ ಕಿಟ್‌ ಪ್ರಾಯೋಜಕತ್ವವನ್ನು ಅಡಿಡಾಸ್‌ ಕಂಪನಿ ವಹಿಸಿಕೊಂಡಿದೆ. ವಿಶ್ವಕಪ್‌ಗೆ ಸಿದ್ಧಪಡಿಸಲಾದ ಜೆರ್ಸಿಯಲ್ಲಿ ಭುಜದ ಮೇಲುಗಡೆ ಕೇಸರಿ, ಬಿಳಿ, ಹಸಿರು ಬಣ್ಣದ ಪಟ್ಟಿಯನ್ನು ಹಾಕಲಾಗಿದೆ.

ರಾಷ್ಟ್ರಗೀತೆಯ ಸಮಯದಲ್ಲಿ ಕೊಹ್ಲಿ ವಿಶ್ವ ಕಪ್​​ಗಾಗಿ ವಿನ್ಯಾಸ ಮಾಡಿರುವ ಜೆರ್ಸಿಯನ್ನು ಬಿಟ್ಟು ದ್ವಿಪಕ್ಷೀಯ ಸರಣಿಗಾಗಿ ತಯಾರಿಸಿದ ಬಿಳಿ ಭುಜದ ಪಟ್ಟೆಗಳನ್ನು ಹೊಂದಿರುವ ಜೆರ್ಸಿಗಳನ್ನು ಹಾಕಿಕೊಂಡು ಬಂದರು. ಭಾರತದ ಸಾಮಾನ್ಯ ಏಕದಿನ ಜರ್ಸಿಯನ್ನು ಧರಿಸಿದ್ದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿ ವಿಷಯ ಅವರ ಗಮನಕ್ಕೆ ಬಂದಿದೆ. ಆದರೂ 34 ವರ್ಷದ ಆಟಗಾರ ಮೊದಲ ಓವರ್​ ಮುಕ್ತಾಯಗೊಳ್ಳುವ ತನಕ ತಪ್ಪು ಜೆರ್ಸಿಯನ್ನು ಧರಿಸಿಯೇ ಮೈದಾನದಲ್ಲಿದ್ದರು. ನಂತರ ಅದನ್ನು ಬದಲಾಯಿಸಿದ್ದಾರೆ.

https://twitter.com/mufaddal_vohra/status/1713116778002612518/photo/1

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 5 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು