ಮುಂಬೈ: ಟೀಂ ಇಂಡಿಯಾದ ವಿಕೆಟ್ ಕೀಪರ್ ಅಂಡ್ ಸ್ಫೋಟಕ ಬ್ಯಾಟ್ಸ್ಮನ್ ರಿಷಬ್ ಪಂತ್ ಐಪಿಎಲ್ ಆಡೋದು ಅಧಿಕೃತವಾಗಿದೆ. ಬಿಸಿಸಿಐ ಪಂತ್ ಆಡಲು ಒಪ್ಪಿಗೆ ನೀಡಿದ್ದು, ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಖಚಿತ ಪಡಿಸಿದೆ.
ಭೀಕರ ಅಪಘಾತಕ್ಕೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ರಿಷಬ್ ಪಂತ್ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದ ಅವರು, ಫಿಟ್ನೆಸ್ಗಾಗಿ ಪುನರ್ವಸತಿ ಕೇಂದ್ರಕ್ಕೆ ಹೋಗಿದ್ದರು. ಇದೀಗ ಕಂಪ್ಲೀಟ್ ಆಗಿ ಫಿಟ್ ಆಗಿದ್ದು, ವಿಕೆಟ್ ಕೀಪಿಂಗ್ ಮಾಡಲೂ ಕೂಡ ಸಮರ್ಥರಿದ್ದಾರೆ. ಹೀಗಾಗಿ ಅವರು 2024ರ ಐಪಿಎಲ್ ಆಡುತ್ತಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
🚨 𝗨𝗽𝗱𝗮𝘁𝗲 𝗼𝗻 𝗥𝗶𝘀𝗵𝗮𝗯𝗵 𝗣𝗮𝗻𝘁:
After undergoing an extensive 14-month rehab and recovery process, following a life-threatening road mishap on December 30th, 2022, @RishabhPant17 has now been declared fit as a wicket-keeper batter for the upcoming #TATA @IPL 2024…
— BCCI (@BCCI) March 12, 2024