ಬೆಂಗಳೂರು: ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ ತೆಲುಗು ಟೈಟಾನ್ಸ್ ವಿರುದ್ಧ 26-25 ಅಂತರದಲ್ಲಿ ಜಯ ಸಾಧಿಸುವ ಮೂಲಕ ಪ್ರೊ ಕಬಡ್ಡಿ ಲೀಗ್ ಸೀಸನ್ 9ರಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿದೆ.
ಪ್ರಥಮಾರ್ಧದ ವಿರಾಮದ ಕಾಲಕ್ಕೆ ಪುಣೇರಿ ತಂಡವು 10-9ರ ಮುನ್ನಡೆಯಲಿತ್ತು. ವಿರಾಮದ ನಂತರದ ಆಟದಲ್ಲಿ ಉಭಯ ತಂಡಗಳ ಹೋರಾಟ ಸಮಬಲದ್ದಾಗಿತ್ತು. ಕ್ಷಣಕ್ಷಣಕ್ಕೂ ಪಂದ್ಯ ಕುತೂಹಲ ಕೆರಳಿಸಿತ್ತು. ಈ ಅವಧಿಯಲ್ಲಿ 15-15ರ ಸಮಬಲವಾಯಿತು. ಆದರೆ ಮೊದಲಾರ್ಧದಲ್ಲಿ ಪುಣೇರಿ ಗಳಿಸಿದ ಒಂದಂಕದ ಅಂತರ ಗೆಲುವಿಗೆ ಕಾರಣವಾಯಿತು.