News Karnataka Kannada
Monday, April 29 2024
ಬೆಂಗಳೂರು ನಗರ

ಬೆಂಗಳೂರು: ಅಂಧರ ಟಿ20 ವಿಶ್ವಕಪ್’ಗೆ ತರಬೇತಿ ಶಿಬಿರ

12-day IndusInd Bank National Coaching Camp in Bhopal to select CABI’s 17 Blind Cricketers for the 3 rd T20 World Cup
Photo Credit :

ಬೆಂಗಳೂರು: ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಹಾಗೂ ಸಮರ್ಥನಂ ಟ್ರಸ್ಟ್ ವತಿಯಿಂದ 29 ಆಟಗಾರರಿಗೆ 12 ದಿನಗಳ ಕಾಲ ತರಬೇತಿ ಶಿಬಿರ ಆಯೋಜಿಸಲಾಗಿದೆ. ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಮಧ್ಯ ಪ್ರದೇಶದ ಭೋಪಾಲ್ನಲ್ಲಿರುವ ಫೇಯ್ತ್ ಕ್ರಿಕೆಟ್ ಕ್ಲಬ್ನಲ್ಲಿ ಈ ಶಿಬಿರ ನಡೆಯಲಿದೆ. ಮುಂಬರುವ 3ನೇ ಟಿ20 ವಿಶ್ವಕಪ್ ಟೂರ್ನಿಗೆ 17 ಸದಸ್ಯರ ತಂಡವನ್ನು ಇದೇ ಸಿಎಐಬಿ ಆಯ್ಕೆ ಮಾಡಲಿದೆ.

ಡಿಸೆಂಬರ್ 5 ರಿಂದ 9 ಟಿ20 ವಿಶ್ವಕಪ್ ಟೂರ್ನಿ ನಡೆಯಲಿದ್ದು, 9 ದೇಶಗಳ ತಂಡಗಳು ಭಾಗವಹಿಸಲಿವೆ. ಟೂರ್ನಿಯಲ್ಲಿ 39 ಪಂದ್ಯಗಳು ನಡೆಯಲಿದ್ದು, ಭಾರತದ ವಿವಿಧ ನಗರಗಳಲ್ಲಿ ನಡೆಯಲಿವೆ. ಭಾರತದಲ್ಲಿ ಅಂಧರ ಕ್ರಿಕೆಟ್ಗೆ ಉತ್ತೇಜನ ನೀಡುವ ದೃಷ್ಟಿಯಿಂದ ಹೆಚ್ಚು ನಗರಗಳಲ್ಲಿ ಆಯೋಜಿಸಲಾಗುತ್ತಿದೆ.

3ನೇ ಆವೃತ್ತಿಯ ಟಿ20 ವಿಶ್ವಕಪ್ ಟೂರ್ನಿಗೆ ಸಿದ್ಧತೆಗಳು ಆರಂಭಗೊಂಡಿವೆ’ ಎಂದು ಸಿಎಬಿಐ ಅಧ್ಯಕ್ಷರಾದ ಜಿ.ಕೆ.ಮಹಾಂತೇಶ್
ತಿಳಿಸಿದ್ದಾರೆ. ತರಬೇತಿ ಶಿಬಿರ ಆಯೋಜಿಸುವ ಮೂಲಕ ಟೂರ್ನಿಗೆ ಸಹಕರಿಸುತ್ತಿರುವ ಇಂಡಸ್ಲ್ಯಾಂಡ್ ಬ್ಯಾಂಕ್’ಗೆ ಧನ್ಯವಾದಗಳು, ಈ ಮೂಲಕ ಅಂಧರ ಕ್ರಿಕೆಟ್ಗೆ ಪ್ರೋತ್ಸಾಹಿಸುತ್ತಿದೆ. ತರಬೇತಿ ಶಿಬಿರ ಆಯೋಜಿಸುವ ಮೂಲಕ ಪ್ರತಿಭಾನ್ವಿತ ಆಟಗಾರರಿಗೆ ಪ್ರೋತ್ಸಾಹಿಸಿದಂತಾಗುತ್ತದೆ.

ಈ ವೇಳೆ ಆಟಗಾರರು ತಾಂತ್ರಿಕವಾಗಿ, ಉತ್ತಮ ಮನಸ್ಥಿತಿಯಲ್ಲಿ ಮುಂಬರುವ ವಿಶ್ವಕಪ್ ಸನ್ನದ್ಧವಾಗಬಹುದು’ ಎಂದು ತಿಳಿಸಿದ್ದಾರೆ.

ಕೋಚಿಂಗ್ ಶಿಬಿರದಲ್ಲಿ ಭಾಗವಹಿಸುತ್ತಿರುವ 29 ಕ್ರಿಕೆಟಿಗರು:

ಬಿ 1.
1. ಪ್ರವೀಣ್ ಕುಮಾರ್ ಶರ್ಮಾ
2. ಸುಜೀತ್ ಮುಂಡಾ
3. ಮುಖೇಶ್ ಕುಮಾರ್ ರಾವತ್
4. ಅಂಕ ವೆಂಕಟೇಶ್ವರ ರಾವ್
5. ಎಂಡಿ ಜಾಫರ್ ಇಕ್ಬಾಲ್
6. ಓಂಪ್ರಕಾಶ್ ಪಾಲ್
7. ಲಲಿತ್ ಮೀನಾ
8. ನಿಲೇಶ್ ಯಾದವ್
9. ಸೋವೇಂದು ಮಹಾತಾ
10. ಸೋನು ಗೋಲ್ಕರ್

ಬಿ2.
1. ಅಜಯ್ ಕುಮಾರ್ ರೆಡ್ಡಿ
2. ವೆಂಕಟೇಶ್ವರ ರಾವ್ ದುನ್ನ
3. ಮನೀಶ್ ಎ
4. ನಕುಲ ಬಡನಾಯಕ್
5. ಗಂಭೀರ್ ಸಿಂಗ್ ಚೌಹಾಣ್
6. ದೀಪಕ್ ಸಿಂಗ್ ರಾವತ್
7. ಇರ್ಫಾನ್ ದಿವಾನ್
8. ಲೋಕೇಶ
9. ಸುರಜಿತ್ ಘಾರಾ

ಬಿ3.

1. ದೀಪಕ್ ಮಲಿಕ್
2. ಸುನಿಲ್ ರಮೇಶ್
3. ತೋಂಪಾಕಿ ದುರ್ಗಾ ರಾವ್
4. ಪ್ರಕಾಶ್ ಜಯರಾಮಯ್ಯ
5. ಸುಖ್ರಾಮ್ ಮಝಿ
6. ಅಮಿತಿ ರವಿ
7. ದೀಪಕ್
8. ಮೊಹಮ್ಮದ್ ಅಜೀಂ
9. ಘೆವಾರ್ ರೆಬಾರಿ
10. ಧಿನಗರ. ಜಿ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು