ಬೆಂಗಳೂರು: ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಸೀಸನ್ 9ರಲ್ಲಿ ಪಾಟ್ನಾ ಪೈರೇಟ್ಸ್ ತಂಡವನ್ನು 54-26 ಅಂಕಗಳಿಂದ ಮಣಿಸಿದ ಬೆಂಗಾಲ್ ವಾರಿಯರ್ಸ್ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.
ನಾಯಕ ಮಣಿಂದರ್ ಸಿಂಗ್ (12) ಹಾಗೂ ಶ್ರೀಕಾಂತ್ ಯಾದವ್ (9) ಅವರ ರೈಡಿಂಗ್ ಅಂಕಗಳ ನೆರವಿನಿಂದ ಬೆಂಗಾಲ್ ವಾರಿಯರ್ಸ್ ಪಂದ್ಯದುದ್ದಕ್ಕೂ ಪಾರಮ್ಯ ಸಾಧಿಸಿ ಗೆಲುವು ಕಂಡಿತು.
ಇದು ಪ್ರಸಕ್ತ ಋತುವಿನಲ್ಲಿ ತಂಡವೊಂದು ಗಳಿಸಿದ ಗರಿಷ್ಠ ಅಂಕವಾಗಿದೆ.