News Karnataka Kannada
Thursday, May 16 2024
ಕ್ರೀಡೆ

ಇಂದು ಬೆಂಗಳೂರು ಬುಲ್ಸ್​ಗೆ 2ನೇ ಪಂದ್ಯ: ಎದುರಾಳಿ ಯಾರು ?

ಪ್ರೊ ಕಬಡ್ಡಿ ಲೀಗ್​ನ 10 ಆವೃತ್ತಿಯ ಮೂರನೇ ದಿನದಂದು ಅಂದರೆ ಡಿಸೆಂಬರ್ 4 ರಂದು ಒಟ್ಟು 2 ಪಂದ್ಯಗಳು ನಡೆಯಲ್ಲಿವೆ. ಇಂದಿನ ಐದನೇ ಪಂದ್ಯದಲ್ಲಿ ಅಂದರೆ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ಮುಖಾಮುಖಿಯಾಗಲಿವೆ.
Photo Credit : News Kannada

ಅಹಮದಾಬಾದ್‌: ಪ್ರೊ ಕಬಡ್ಡಿ ಲೀಗ್​ನ 10 ಆವೃತ್ತಿಯ ಮೂರನೇ ದಿನದಂದು ಅಂದರೆ ಡಿಸೆಂಬರ್ 4 ರಂದು ಒಟ್ಟು 2 ಪಂದ್ಯಗಳು ನಡೆಯಲ್ಲಿವೆ. ಇಂದಿನ ಐದನೇ ಪಂದ್ಯದಲ್ಲಿ ಅಂದರೆ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಹಾಗೆಯೇ ದಿನದ ಎರಡನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ನಡುವೆ ಫೈಟ್ ನಡೆಯಲ್ಲಿದೆ. ಎರಡೂ ಪಂದ್ಯಗಳು ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನಲ್ಲಿ ನಡೆಯಲಿದ್ದು, ಕ್ರಮವಾಗಿ 8 ಹಾಗೂ 9 ಗಂಟೆಗೆ ಆರಂಭವಾಗಲಿವೆ. ಹಾಗೆಯೇ ಪಂದ್ಯಗಳನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿದ ಭಾಷೆಗಳಲ್ಲಿ ವೀಕ್ಷಿಸಬಹುದಾಗಿದೆ.

ಇನ್ನು ದಿನದ ಎರಡನೇ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವ ಬೆಂಗಳೂರು ಬುಲ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ತಂಡಗಳು ಪ್ರೊ ಕಬಡ್ಡಿಯಲ್ಲಿ ಇದುವರೆಗೆ 20 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಬುಲ್ಸ್ ಮೇಲೆ ಸವಾರಿ ಮಾಡಿರುವ ವಾರಿಯರ್ಸ್​ 11 ಪಂದ್ಯಗಳನ್ನು ಗೆದ್ದು ಬೀಗಿದೆ. ಉಳಿದಂತೆ ಬೆಂಗಳೂರು ತಂಡ 9 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇನ್ನು ಉಭಯ ತಂಡಗಳ ಕೊನೆಯ ಮುಖಾಮುಖಿಯಲ್ಲಿ ವಾರಿಯರ್ಸ್​ ತಂಡ 41- 38 ರಿಂದ ಬುಲ್ಸ್ ತಂಡವನ್ನು ಮಣಿಸಿತ್ತು. ಹೀಗಾಗಿ ಹಿಂದಿನ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಬುಲ್ಸ್ ತಂಡ ಅಖಾಡಕ್ಕಿಳಿಯಲ್ಲಿದೆ

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು