News Karnataka Kannada
Thursday, May 09 2024
ಕ್ರೀಡೆ

ಪ್ರಿ ಕ್ವಾರ್ಟರ್‌ಗೇರಿದ ಬೋಪಣ್ಣ: ಕನ್ನಡದಲ್ಲೇ ವಿಶ್ ಮಾಡಿದ ವಿಂಬಲ್ಡನ್‌

Rohan Bopanna
Photo Credit : Twitter

ಲಂಡನ್‌: ಭಾರತದ ಹಿರಿಯ ಟೆನಿಸಿಗ ರೋಹನ್‌ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಇದರ ಬೆನ್ನಲ್ಲೇ ವಿಂಬಲ್ಡನ್ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಕನ್ನಡದಲ್ಲೇ ರೋಹನ್ ಬೋಪಣ್ಣ ಅವರನ್ನು ‘ಭಾರತದ ಸೂಪರ್ ಸ್ಟಾರ್’ ಎಂದು ಟ್ವೀಟ್ ಮಾಡುವ ಮೂಲಕ ಗೌರವ ಸೂಚಿಸಿದೆ. ಇದು ಕನ್ನಡ ಟೆನಿಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಇನ್ನು ವಿಂಬಲ್ಡನ್ ಅವರ ಕನ್ನಡ ಟ್ವೀಟ್‌ ಅನ್ನು ಸ್ವತಃ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ರೋಹನ್ ಬೋಪಣ್ಣ, ಕನ್ನಡದಲ್ಲೇ ಧನ್ಯವಾದ ಎಂದು ರೀಟ್ವೀಟ್‌ ಮಾಡಿದ್ದಾರೆ. ಈ ಮೂಲಕ ರೋಹನ್ ಬೋಪಣ್ಣ ಕೂಡಾ ತಮ್ಮ ಕನ್ನಡಾಭಿಮಾನ ಮೆರೆದಿದ್ದಾರೆ.

ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆ ಕಣಕ್ಕಿಳಿದಿರುವ ಅವರು, ಸೋಮವಾರ 2ನೇ ಸುತ್ತಿನ ಪಂದ್ಯದಲ್ಲಿ ಬ್ರಿಟನ್‌ನ ಜೇಕಬ್‌-ಜೊಹನ್ನಸ್‌ ಮಂಡೇ ವಿರುದ್ಧ 7-5. 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಪ್ರಿ ಕ್ವಾರ್ಟರ್‌ನಲ್ಲಿ ಇಂಡೋ-ಆಸೀಸ್‌ ಜೋಡಿಗೆ ನೆದರ್‌ಲೆಂಡ್ಸ್‌ನ ಡೇವಿಡ್‌ ಪೆಲ್‌-ಅಮೆರಿಕದ ರೀಸ್‌ ಸ್ಟಾಲ್ಡರ್‌ ಸವಾಲು ಎದುರಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು