ಹೈದರಾಬಾದ್: ವ್ಯಕ್ತಿಯೊಬ್ಬರು ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದ ಚಿಕನ್ ಬಿರಿಯಾನಿಯಲ್ಲಿ ಸತ್ತ ಇಲಿ ಪತ್ತೆಯಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಅಂಬರ್ಪೇಟೆಯ ಡಿಡಿ ಕಾಲೋನಿಯ ವಿಶ್ವ ಆದಿತ್ಯ ಎಂಬವರು ಫುಡ್ ಡೆಲಿವರಿ ಆಪ್ ಝೊಮಾಟೊದಲ್ಲಿ ಬಿರಿಯಾನಿ ಆರ್ಡರ್ ಮಾಡಿದ್ದರು.
ಆರ್ಟಿಸಿ ಕ್ರಾಸ್ ರಸ್ತೆಯಲ್ಲಿರುವ ಬಾವರ್ಚಿ ಹೋಟೆಲ್ನಿಂದ ವ್ಯಕ್ತಿ ಆಹಾರ ಆರ್ಡರ್ ಮಾಡಿದ್ದರು. ಝೊಮಾಟೊ ವಿತರಿಸಿದ ಬಿರಿಯಾನಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬಿರಿಯಾನಿಯಲ್ಲಿ ಸಿಕ್ಕ ಈ ಹಲ್ಲಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ತೆಲುಗು ಸ್ಕ್ರೈಬ್ ಹೆಸರಿನ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಈ ಪೋಸ್ಟ್ನ್ನು ರೀಟ್ವೀಟ್ ಮಾಡಿದವರೊಬ್ಬರು ಹೈದರಾಬಾದ್ ಬಿರಿಯಾನಿಯಲ್ಲಿ ಹಲ್ಲಿಗಳು, ಜಿರಳೆಗಳು, ಇಲಿಗಳು ಸಿಗುವುದು ಸಹಜವಾಗಿ ಬಿಟ್ಟಿದೆ ಪ್ರತಿಕ್ರಿಯಿಸಿದ್ದಾರೆ.
హైదరాబాద్ ఆర్టీసీ క్రాస్ రోడ్ లోనీ బావర్చి హోటల్లో చికెన్ బిర్యానిలో ప్రత్యక్షమైన బల్లి
అంబర్పేట డిడి కాలనీ కి చెందిన విశ్వ ఆదిత్య ఆన్లైన్లో జొమాటోలో చికెన్ బిర్యానికి ఆర్డర్
జొమోటో బాయ్ తీసుకువచ్చిన చికెన్ బిర్యానిలో బల్లి వచ్చిందని కుటుంబ సభ్యుల ఆరోపణ
బావర్చి యాజమాన్యం… pic.twitter.com/5h0x1fltiQ
— Telugu Scribe (@TeluguScribe) December 2, 2023