News Karnataka Kannada
Friday, May 17 2024
ಕ್ರೀಡೆ

ಐಪಿಎಲ್ 2024: ಐಪಿಎಲ್ ಆಟಗಾರರ ಹರಾಜಿಗೆ ಡೇಟ್ ಫಿಕ್ಸ್

Photo Credit : News Kannada

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​ 17 ಗಾಗಿ ಬಿಸಿಸಿಐ ಸಿದ್ಧತೆಗಳನ್ನು ಆರಂಭಿಸಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಐಪಿಎಲ್ ಹರಾಜಿಗಾಗಿ ಡೇಟ್ ಫಿಕ್ಸ್​ ಮಾಡಲಾಗಿದೆ. ಅದರಂತೆ “ಡಿಸೆಂಬರ್ 19 ರಂದು ದುಬೈನಲ್ಲಿ” ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನ 10 ಫ್ರಾಂಚೈಸಿಗಳು ಉಳಿಸಿಕೊಂಡಿರುವ & ಬಿಡುಗಡೆ ಮಾಡಲಾಗಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕು. ಇದಕ್ಕಾಗಿ ನ.15 ರವರೆಗೆ ಕಾಲಾವಕಾಶ ನೀಡಲಾಗಿದೆ.

ಮುಂಬರುವ ಐಪಿಎಲ್​ ಹರಾಜಿಗಾಗಿ ಪ್ರತಿ ಫ್ರಾಂಚೈಸಿಗಳಿಗೆ 100 ಕೋಟಿಯ ಪರ್ಸ್ ನೀಡಲಾಗುತ್ತಿದೆ. ಕಳೆದ ಬಾರಿಯ ಹರಾಜಿನಲ್ಲಿ ಎಲ್ಲಾ ಫ್ರಾಂಚೈಸಿಗಳು 95 ಕೋಟಿಯೊಂದಿಗೆ ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಂಡಿತ್ತು. ಈ ಬಾರಿ 5 ಕೋಟಿ ರೂ. ಅನ್ನು ಹೆಚ್ಚಿಸಲಾಗಿದ್ದು, ಅದರಂತೆ 100 ಕೋಟಿಯೊಳಗೆ ಆಟಗಾರರನ್ನು ಖರೀದಿಸಬಹುದು.

ಈ ಬಾರಿ ಕೂಡ ವುಮೆಮ್ಸ್​ ಪ್ರೀಮಿಯರ್ ಲೀಗ್ ನಡೆಯಲಿದ್ದು, ಈ ಲೀಗ್​ನ ಆಟಗಾರ್ತಿಯರ ಹರಾಜು ಪ್ರಕ್ರಿಯೆ ಡಿಸೆಂಬರ್ 9 ರಂದು ನಡೆಸಲು ಯೋಜನೆ ರೂಪಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು