ಇಂದು ನರೇಂದ್ರ ಮೋದಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಗೆದ್ದು ಬೀಗಿದೆ. ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ನಿಗದಿತ 50 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 282 ರನ್ ಗಳಿಸಿತ್ತು. ಬೇರ್ಸ್ಟೋ 33, ರೂಟ್ 77, ಹ್ಯಾರೀ ಬ್ರೂಕ್ 25, ಜೋಸ್ ಬಟ್ಲರ್ 43 ರನ್ ಗಳಿಸಿದ್ದರು. ಈ ಮೂಲಕ ನ್ಯೂಜಿಲೆಂಡ್ಗೆ ಸಾಧಾರಣ ಮೊತ್ತದ ಗುರಿ ನೀಡಿದ್ದರು.
ಇನ್ನು, ಇಂಗ್ಲೆಂಡ್ ನೀಡಿದ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ಪರ ಡಿವೋನ್ ಕಾನ್ವೇ ಓಪನರ್ ಆಗಿ ಬಂದರು. ಇಂಗ್ಲೆಂಡ್ ಬೌಲರ್ಗಳ ಬೆಂಡೆತ್ತಿದ ಕಾನ್ವೇ ಕೇವಲ 121 ಬಾಲ್ನಲ್ಲಿ 3 ಸಿಕ್ಸರ್, 19 ಫೋರ್ ಸಮೇತ 152 ರನ್ ಚಚ್ಚಿ ಆಟ ಮುಂದುವರೆಸಿದ್ದಾರೆ. ನ್ಯೂಜಿಲೆಂಡ್ ಕೇವಲ 36.2 ಓವರ್ನಲ್ಲಿ 1 ವಿಕೆಟ್ ನಷ್ಟಕ್ಕೆ 283 ರನ್ ಸಿಡಿಸಿ ಗೆಲುವು ಸಾಧಿಸಿದೆ. ಈ ಮೂಲಕ ಹೊಸ ದಾಖಲೆ ಬರೆದಿದೆ.